ಮುರಿದು ಬಿದ್ದ ಬ್ರಿಡ್ಜ್: ೩೦ ಕುರಿ ಸಾವು

ಕುರಿ
Advertisement

ಘಟಪ್ರಭಾ : ಮಲ್ಲಾಪುರ ಪಿಜಿ ಹತ್ತಿರ ಇರುವ ಘಟಪ್ರಭಾ ಎಡದಂಡೆ ಕಾಲುವೆ ದಾಟಲು ಸಾರ್ವಜನಿಕರಿಗೆ ನಿರ್ಮಿಸಿದ ಬ್ರಿಡ್ಜ್ ಕುಸಿದು ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.
ಘಟಪ್ರಭಾ ಎಡದಂಡೆ ಕಾಲುವೆಗೆ ನಿನ್ನೆ ನೀರು ಬಿಡಲಾಗಿದ್ದು ಕಾಲುವೆ ತುಂಬಿ ಹರಿಯುತ್ತಿದೆ. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿರುವ ಕಾರಣ ಹಲವಾರು ಕುರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ. ಕೇವಲ ೧೫ ಸಾವನ್ನಪ್ಪಿರುವ ಕುರಿಗಳನ್ನು ಹೊರ ತೆಗೆಯಲಾಗಿದೆ. ಇದಕ್ಕೆ ನೀರಾವರಿ ಇಲಾಖೆಯವರ ನಿರ್ಲಕ್ಷಣವೆ ಕಾರಣವೆಂದು ಕುರಿಯ ಮಾಲಿಕ ಮಲ್ಲಪ್ಪಾ ಶಿರಹಟ್ಟಿ ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದು ಸುಮಾರು ೫ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳೇ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿ ಆಗಮಿಸಿ ಪರಿಶೀಲಿಸುತ್ತಿದ್ದಾರೆ.