RCB ಆಪದ್ಬಾಂಧವನಿಗೆ 39 ರ ಸಂಭ್ರಮ: ನಿವೃತ್ತಿ ಕಾರಣ ತಿಳಿಸಿದ DK

Advertisement

ಚೆನ್ನೈನ ತೆಲುಗು ಕುಟುಂಬದಲ್ಲಿ 1 ಜೂನ್ 1985 ರಂದು ಜನಿಸಿದ ದಿನೇಶ್ ಕಾರ್ತಿಕ್, ಇಂದು 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನವದೆಹಲಿ: ಭಾರತೀಯ ಫಿನಿಶರ್‌ಗಳಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟ ದಿನೇಶ್‌ ಕಾರ್ತಿಕ್‌ ಐಪಿಎಲ್‌ನಿಂದ ನಿವೃತ್ತಿ ಹೊಂದಲು ಕಾರಣ ಬಹಿರಂಗ ಪಡಿಸಿದ್ದಾರೆ.
ಈ ಕುರಿತಂತೆ ಕ್ರಿಕ್ ಬಜ್ ನಲ್ಲಿ ಮಾತನಾಡಿರುವ ಅವರು ನಾನು ಏನು ಮಾಡಿದರೂ ನನ್ನ 100% ನೀಡಬೇಕು ಎಂದು ಬಯಸುವವನು, ಏನೇ ಮಾಡಿದರೂ ಅದರಲ್ಲಿ ಅತ್ಯುತ್ತಮವಾದುದನ್ನೇ ನೀಡಬೇಕು ಎಂದು ಬಯಸುತ್ತೇನೆ. ಇನ್ನೂ ಮೂರು ವರ್ಷಗಳ ಕಾಲ ಕ್ರಿಕೆಟ್‌ ಆಡಲು ದೈಹಿಕವಾಗಿ ತುಂಬಾ ಸಿದ್ಧನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದೊಂದಿಗೆ, ಅದು ತುಂಬಾ ಸುಲಭವಾಗುತ್ತದೆ. ಮತ್ತು ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂಬ ಅಂಶವೂ ನನ್ನ ನಿರ್ಧಾರಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಇಂದು ದಿನೇಶ್‌ ಕಾರ್ತಿಕ್‌ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಈ ಬಾರಿಯು ಆರ್‌ಸಿಬಿ ಪರ ಉತ್ತಮ ಆಟವಾಡಿದ್ದ ದಿನೇಶ್ ಕಾರ್ತಿಕ್, 187.36ರ ಸ್ಟ್ರೈಕ್ ರೇಟ್ ನಲ್ಲಿ 326 ರನ್ ಗಳಿಸಿದ್ದರು. ಟೆಸ್ಟ್‌ನಲ್ಲಿ 7 ಅರ್ಧಶತಕಗಳು, ಏಕದಿನದಲ್ಲಿ 9 ಮತ್ತು ಟಿ20ಯಲ್ಲಿ 1 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಕೆಟ್‌ ಕೀಪಿಂಗ್‌ ಜೊತೆಗೆ ಒಂದು ಓವರ್ ಮಾಡಿರುವ ಕಾರ್ತಿಕ್ 6 ಎಸೆತಗಳಲ್ಲಿ 18 ರನ್ ನೀಡಿದ್ದಾರೆ.