RCBಗೆ ಸತತ ನಾಲ್ಕನೇ ಗೆಲುವು

Advertisement


ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 4ನೇ ಗೆಲುವು ದಾಖಲಿಸಿ. ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಅಂತರದಿಂದ ಅದ್ಭುತ ಜಯ ಸಾಧಿಸಿ ಪ್ಲೇಆಫ್ ಆಸೆ ಜೀವಂತವಾಗಿಸಿದೆ.

ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌‌ ಬೆಂಗಳೂರು ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ಪ್ಲೇಆಫ್‌ ಆಸೆ ಇನ್ನೂ ಜೀವಂತವಾಗಿಸಿದೆ. ಉಳಿದ ಮುಂದಿನ 2 ಪಂದ್ಯಗಳನ್ನು ಆರ್‌‌ಸಿಬಿ ಗೆದ್ದರೆ 14 ಅಂಕ ದೊರಕಲಿದೆ. ಈ ಮೂಲಕ ಪ್ಲೇಆಫ್‌ ಹಂತದಲ್ಲಿ ಇನ್ನೂ ಉಳಿಯಲಿದೆ.

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು, ಮೊದಲು ಬ್ಯಾಟಿಂಗ್‌ ಮಾಡಿದ ಆರ್‌‌ಸಿಬಿ ನಿಗದಿತ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್‌ ಸಿಡಿಸಿತು. ಈ ಬೃಹತ್‌ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ತಂಡವು  17 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 181 ರನ್‌ ಗಳಿಸುವ ಮೂಲಕ 60 ರನ್‌ ಗಳಿಂದ ಸೋಲನ್ನಪ್ಪಿತು.