ಜಿಸ್ಯಾಟ್-24 ಉಪಗ್ರಹವನ್ನು ಫ್ರೆಂಚ್ ಗಯಾನದ ಕೌರೌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್)ಗಾಗಿ ಇಸ್ರೋ ನಿರ್ಮಿಸಿದ GSAT-24, DTH ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಪ್ಯಾನ್-ಇಂಡಿಯಾ ವ್ಯಾಪ್ತಿಯೊಂದಿಗೆ 4,180 ಕೆಜಿ ತೂಕದ 24-Ku ಬ್ಯಾಂಡ್ ಸಂವಹನ ಉಪಗ್ರಹವಾಗಿದೆ. ಕೆಲ ಸುಧಾರಣೆಗಳ ಬಳಿಕ ಎನ್ಎಸ್ಐಎಲ್ ಕೈಗೊಂಡಿರುವ ಸಂವಹನ ಉಪಗ್ರಹ ಉಡ್ಡಯನವಾಗಿದೆ. ಬಾಹ್ಯಾಕಾಶ ಇಲಾಖೆಯ ಅಡಿ ಭಾರತ ಸರ್ಕಾರದ NSIL ಈ ಉಪಗ್ರಹವರನ್ನು ಟಾಟಾ ಪ್ಲೇಗೆ ಗುತ್ತಿಗೆ ನೀಡಿದೆ.