ಬೆಂಗಳೂರು: 13ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೆ. ಸಂತೋಷ್ ಬಾಬು (ಕೆಎನ್-2011) ರಾಮನಗರ ಎಸ್ಪಿ ತಕ್ಷಣದಿಂದಲೇ ವರ್ಗಾವಣೆ. ಗುಪ್ತದಳದ ಎಸ್‌ಪಿಯಾಗಿ ಮುಂದಿನ ಆದೇಶದ ತನಕ ನಿಯೋಜನೆ.
ಕಾರ್ತಿಕ್ ರೆಡ್ಡಿ (ಕೆಎನ್ -2011) ಎಸ್‌ಪಿ ವೈರ್‌ಲೆಸ್ ವಿಭಾಗ ಬೆಂಗಳೂರು, ವರ್ಗಾವಣೆ. ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಪಾಟೀಲ್ ವಿನಾಯಕ್ ವಸಂತರಾವ್(ಕೆಎನ್-2011) ಅಸಿಸ್ಟೆಂಟ್ ಜನರಲ್ ಆಫ್ ಪೊಲೀಸ್ ಜನರಲ್, ಬೆಂಗಳೂರು ಆಗಿ ನಿಯೋಜನೆ.
ಟಿ.ಪಿ. ಶಿವಕುಮಾರ್ (ಕೆಎನ್-2012) ಚಾಮರಾಜನಗರ ಎಸ್‌ಪಿ ವರ್ಗಾವಣೆ. ಕೆಪಿಟಿಸಿಎಲ್ ಎಸ್‌ಪಿಯಾಗಿ ನಿಯೋಜನೆ ಮಾಡಿ ಆದೇಶ.
ಡಿ. ದೇವರಾಜ್(ಕೆಎನ್-2012) ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ ನೇಮಕ.
ಡಿಆರ್‌ಸಿರಿ ಗೌರಿ (ಕೆಎನ್-2012) ಎಸ್‌ಪಿ ಇಂಟರ್ನಲ್ ಸೆಕ್ಯುರಿಟಿ ಡಿವಿಷನ್ ಆಗಿ ನೇಮಕ.
ಪದ್ಮಿನಿ ಸಾಹೋ (ಕೆಎನ್-2015) ಅಸಿಸ್ಟೆಂಟ್ ಜನರಲ್ ಆಫ್ ಪೊಲೀಸ್ ಜನರಲ್, ಬೆಂಗಳೂರು ಚಾಮರಾಜನಗರ ಎಸ್‌ಪಿಯಾಗಿ ನೇಮಕ.
ಪ್ರದೀಪ್ ಗುಂಟಿ (ಕೆಎನ್-2016) ಬಂಧಿಖಾನೆ ಎಸ್‌ಪಿಯಾಗಿ ನೇಮಕ.
ಗೀತಾ ಎಂ. ಎಸ್. (ಕೆಎನ್-2016) ಡಿಸಿಪಿ ಮೈಸೂರು ಅಪರಾಧ & ಸಂಚಾರಿ ವರ್ಗಾವಣೆ. ಎಸ್‌ಪಿ & ಪ್ರಿನ್ಸಿಪಲ್ ಪೊಲೀಸ್ ತರಬೇತಿ ಶಾಲೆ ಮೈಸೂರಿಗೆ ನೇಮಕ. ಕೆ. ರಾಮರಾಜನ್ (ಕೆಎನ್-2017) ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು ವರ್ಗಾವಣೆ, ಕೊಡಗು ಎಸ್‌ಪಿಯಾಗಿ ನೇಮಕ.