ಸಿದ್ಧರಾಮಯ್ಯ ಸ್ವತ ಪಕ್ಷ ಸ್ಥಾಪನೆ ಮಾಡಿ ಐದು ಸ್ಥಾನ ಗೆಲ್ಲಲಿ: ಎಚ್‌ಡಿಕೆ ಸವಾಲು

Advertisement

ರಾಯಚೂರು: ಸಿದ್ಧರಾಮಯ್ಯನವರು ಪದೇ ಪದೇ ಜೆಡಿಎಸ್ ಪಕ್ಷ ಮೂರು ನಾಲ್ಕು ಜಿಲ್ಲೆಗೆ ಸೀಮಿತ ಎಂದು ಹೇಳುವ ಅವರು ಸ್ವತಂತ್ರದ ಪಕ್ಷ ಸ್ಥಾಪನೆ ಮಾಡಿ ಐದು ಸ್ಥಾನಗಳನ್ನ ಗೆಲ್ಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ತಾಕೀತು ಮಾಡಿದರು. ಶನಿವಾರ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರು ನಾವಿದ್ದಾಗ 58 ಸ್ಥಾನಗಳನ್ನು ಗೆಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಅದರಲ್ಲಿ ನಮ್ಮ ಕೊಡುಗೆ ಇದೆ. ಎಂ.ಪಿ ಪ್ರಕಾಶ, ಪಿಜಿಆರ್ ಸಿಂಧೆ ಸೇರಿದಂತೆ ಅನೇಕರಿದ್ದಾಗ ಅಷ್ಟು ಸ್ಥಾನಗಳು ಬಂದಿದ್ದವು, ನಾನು ಏಕಾಂಗಿಯಾಗಿ 40 ಸ್ಥಾನ ಗೆಲ್ಲಿಸಲು ಕಾರ್ಯಕರ್ತರು ಶಕ್ತಿ ನೀಡಿದ್ದಾರೆ ಎಂದು ಹೇಳಿದರು. ನಮ್ಮ ಪಕ್ಷವನ್ನು ಡಿ.ಕೆ ಶಿವಕುಮಾರ ಅವರು ನಿಂದಿಸುವುದರಿಂದ ರಾಜ್ಯದಾದ್ಯಂತ ಜೆಡಿಎಸ್ ಶಕ್ತಿ ಹೆಚ್ಚಾಗಿದೆ. ಮೂರು ನಾಲ್ಕು ಜಿಲ್ಲೆಗಳಲ್ಲಿ ಇದ್ದ ಶಕ್ತಿ ರಾಜ್ಯದುದ್ದೂಕ್ಕೂ ವೃದ್ಧಿಯಾಗಿದೆ. ಐದು ವರ್ಷ ಸಂಪೂರ್ಣವಾಗಿ ಅಧಿಕಾರ ನೀಡಿದರೆ, ಜನರಿಗೆ ನೀಡಿದ ಭರವಸೆಯನ್ನು ಈಡೇರಿಸದೇ ಇದ್ದರೆ, ವಿಸರ್ಜನೆ ಮಾಡುತ್ತೇನೆ ಎಂದು ಹೇಳಿರುವುದು. ಅದು ಅರ್ಥವಾಗದಿದ್ದರೆ, ಡಿ.ಕೆ ಶಿವಕುಮಾರ ತಿಳಿದುಕೊಳ್ಳಲಿ ಎಂದು ದೂರಿದರು.
ಸುಳ್ಳಿನ ರಾಮಯ್ಯನವರು ಅವರು ನಮ್ಮ ಪಕ್ಷಕ್ಕೆ 25 ಸ್ಥಾನವೆಂದು ಹೇಳುತ್ತಿದ್ದಾರೆ. ಆದರೆ, 50 ಸ್ಥಾನಗಳು ಬಂದರೆ, ವಿಸರ್ಜನೆ ಮಾಡಲು ಬರುತ್ತದೆಯೋ. ಸ್ಪಷ್ಟ ಬಹುಮತ ಜನರು ನೀಡಿದರೆ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಹೋಗಿದೆ. ರಾಜ್ಯದಲ್ಲಿ 60 ಸೀಟ್‌ಗಳನ್ನು ಕಳೆದುಕೊಳ್ಳುತ್ತಾರೆ. ನನ್ನ ವಿರುದ್ಧ ಆರೋಪ ಮಾಡುವ ಮೂಲಕ ಇರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಟೀಕೆ ಮಾಡುತ್ತಾ ಹೋದರೆ, ನನ್ನ ಹೆಸರು ಹೇಳದೇ ಇದ್ದರೆ, ಜೀರ್ಣವಾಗುವುದಿಲ್ಲ. ಸಿದ್ರಾಮಯ್ಯ ಅವರಿಗೆ ಇದು ಕೊನೆ ಚುನಾವಣೆ ಎಂಬುವುದನ್ನು ಅವರ ಮಗನ ಹೇಳಿಕೆ ಸರಿಯಾಗಿದೆ. ಚಾಮುಂಡಿದೇವಿಯೇ ಅವರಿಂದ ಹೇಳಿಸಿದ್ದಾಳೆ. ಕೋಲಾರದಲ್ಲಿ ನಿಂತರೆ ಇದೇ
ಕೊನೆ ಚುನಾವಣೆಯಾಗಲಿದೆ ಎಂದು ಹೇಳಿದರು. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುವುದು ಖಾಸಗಿ ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ ಕೇಂದ್ರದಿಂದ ಯಾವುದೇ ಕೊಡುಗೆ ತಂದಿಲ್ಲ. ಮಹಾದಾಯಿ ಯೋಜನೆ ಜಾರಿಗೆ ಟೆಂಡರ್
ಕರೆಯುವುದಾಗಿ ಹೇಳಿದ್ದಾರೆ. ಆದರೆ, ಈಗ ಅರಣ್ಯ ಇಲಾಖೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿಸಿದರು. ಈಗ ರೈತರು ಸಾಲಮನ್ನಾ ಮಾಡಿರುವುದನ್ನು ನೆನೆಯುತ್ತಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾವು ಉಳಿಯುತ್ತೇವೆ ಎಂಬುವುದು ರೈತರಿಗೆ ತಿಳಿದಿದೆ ಎಂದು ವಿವರಿಸಿದರು.