ನವದೆಹಲಿ: ಮಧ್ಯಪ್ರದೇಶದ ಗ್ವಾಲಿಯರ್ ಏರ್‌ಬೇಸ್‌ನಿಂದ ಹೊರಟಿದ್ದ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ತಿಳಿದುಬಂದಿದೆ. ಆದರೆ, ಈ ಅವಘಡಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲ. ಒಂದೇ ದಿನದಲ್ಲಿ ವಾಯಪಡೆಯು ಮೂರು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ. ಮಧ್ಯಪ್ರದೇಶಧ ಮೊರೆನೊದಲ್ಲಿ ತರಬೇತಿ ನಿರತ ಸುಖೊಯ್ -30 ಮತ್ತು ಮಿರಾಜ್-2000 ಯುದ್ಧ ವಿಮಾನಗಳು ಪತನಗೊಂಡಿರುವುದಾಗಿ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಇನ್ನು ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.