ಮಗುವನ್ನು ಕಣ್ತುಂಬಿಕೊಳ್ಳಬೇಕಿದ್ದ ಯೋಧ ಮರಳಿದ್ದು ಶವವಾಗಿ

Advertisement

ಮಂಗಳೂರು: ಮೊದಲ ಬಾರಿ ತನ್ನ ಮಗುವನ್ನು ಕಣ್ತುಂಬಿಕೊಳ್ಳಲು ಜತೆಗೆ ತನ್ನ ತಾಯಿ ಆಗಲಿದ ಪ್ರಥಮ ವರ್ಷದ ವಿಧಿವಿಧಾನಗಳನ್ನು ಪೂರೈಸಲು ಹುಟ್ಟೂರಿಗೆ ಗೆ ಆಗಮಿಸಬೇಕಿದ್ದ ಮಂಗಳೂರು ಶಕ್ತಿನಗರದ ಯೋಧ ಮುರಳೀಧರ ರೈ ಅದೇ ದಿನ ಶವವಾಗಿ ಮರಳಿದ ಮನ ಕಲಕುವ ಘಟನೆ ನಡೆದಿದೆ.
ಭೋಪಾಲ್‌ನಲ್ಲಿ ಸಶಸ್ತç ಸೀಮಾ ಬಲ್‌ನಲ್ಲಿ ಮುರಳೀಧರ ಪೈ (37) ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವರ್ಷದ ಹಿಂದೆ ಅವರ ತಾಯಿ ತೀರಿಕೊಂಡಿದ್ದು, ಅದರ ವಾರ್ಷಿಕ ಕ್ರಿಯಾಕರ್ಮ ಮಂಗಳವಾರಕ್ಕೆ ನಿಗದಿಯಾಗಿತ್ತು. ಅದಕ್ಕೆ ಅವರು ಊರಿಗೆ ಬರುವ ಯೋಜನೆ ಹಾಕಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಭೋಪಾಲ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಜ.22ರ ಮಧ್ಯ ರಾತ್ರಿ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಇಂದು ಪಾರ್ಥಿವ ಶರೀರ ಮಂಗಳೂರು ತಲುಪಿದೆ. ಮುರಳೀಧರ ರೈ ಅವರ ಪತ್ನಿ ಉಷಾ ಏಳುತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಕಣ್ಣುಂಬಿಕೊಳ್ಳಲು ಮುರಳೀಧರ ರೈ ಊರಿಗೆ ಆಗಮಿಸುವವರಿದ್ದರು. ಆದರೆ ವಿಧಿಯ ಲೆಕ್ಕಚಾರದ ಮುಂದೆ ಏನೂ ನಡೆಯಲಿಲ್ಲ.
ಪಾರ್ಥಿವ ಶರೀರ ಇಂದು ಬೆಳಗ್ಗೆ 8 ಗಂಟೆಗೆ ಎ ಜೆ ಆಸ್ಪತ್ರೆಯಿಂದ, ಅವರ ಮನೆ ಸಂಜಯ ನಗರ ಮುಗ್ರೋಡಿ ಸೆವೆನ್ ಸ್ಟಾರ್ ಕ್ಲಬ್ ನ ಹತ್ತಿರಕ್ಕೆ ಬಂದು ಆಂಜನೇಯ ಸಭಾಭವನದ ಮೈದಾನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಅಲ್ಲಿಂದ ಮಹಾಕಾಳಿ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು.
ಶಾಸಕ ಡಿ. ವೇದವ್ಯಾಸ ಕಾಮತ್ ಗೌರವ ನಮನ ಸಲ್ಲಿಸಿದರು. ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದ.ಕ.ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಮೊದಲಾದವರಿದ್ದರು.