ಪ್ರಿಯಾಂಕಾ ಗಾಂಧಿ ನಾಯಕಿ ಎಂದು ಸ್ವಯಂ ಘೋಷಿಸಿಕೊಳ್ಳುವ ಸ್ಥಿತಿ ಒದಗಿದೆ ಸಿಎಂ ಬೊಮ್ಮಾಯಿ

BASAVARAJ BOMAI
Advertisement

ಹುಬ್ಬಳ್ಳಿ: ಪ್ರಿಯಾಂಕಾ ಗಾಂಧಿಗೆ ನಾನು ನಾಯಕಿ ಎಂದು ಸ್ವಯಂ ಹೇಳಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯಕ್ಕೆ ಅವರು ಬರುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅವರ ಜಾಹೀರಾತಿನಲ್ಲಿ ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಅವರೇ ತಾವೇ ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಮಹಿಳೆಯರಿಗಾಗಿ ಕಾಂಗ್ರೆಸ್ ಪ್ರತ್ಯೇಕ ಬಜೆಟ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ
ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಏನು ಬೇಕಾದರೂ ಆಶ್ವಾಸನೆ ನೀಡುತ್ತಾರೆ ಎಂದರು.
ಕಾಂಗ್ರೆಸ್ ವಿನಾಶದ ಕನಸು ಕಾಣುತ್ತಿದೆ
ಕಾಂಗ್ರೆಸ್ ಯುವಜನೋತ್ಸವವನ್ನು ವಿನಾಶೋತ್ಸವ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಥಾ ಬುದ್ದಿ ತಥಾ ಮಾತುಗಳು. ಕಾಂಗ್ರೆಸ್ ವಿನಾಶದ ಕನಸು ಕಾಣುತ್ತಿದೆ. ಎಲ್ಲದರಲ್ಲಿಯೂ ವಿನಾಶವನ್ನೇ ಕಾಣುತ್ತಿದೆ. ಒಳ್ಳೆಯ ಕೆಲಸಗಳನ್ನು ಮೆಚ್ಚುವುದು ಅವರಿಗೆ ತಿಳಿದಿಲ್ಲ. ಇತ್ತೀಚೆಗೆ ಅವರ ಭಾಷೆ, ಚಿಂತನೆ, ನಡವಳಿಕೆ ದೇಶದ ವಿಚಾರ, ರಾಜ್ಯದ ಪ್ರಗತಿ ಬಗ್ಗೆ ಕೀಳು ಮಟ್ಟದ ಮಾತುಗಳು ಹತಾಶ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತದೆ .ಇದಕ್ಕೆ ಬಹಳ ಮಹತ್ವಕೊಡುವ ಅಗತ್ಯವಿಲ್ಲ ಎಂದರು.