ಎಲ್ಲರ ಒತ್ತಾಯದ ಮೇರೆಗೆ ಕೋಲಾರದಲ್ಲಿ ಸ್ಪರ್ಧೆ

Advertisement

ಕೋಲಾರ: ಎಲ್ಲಾ ನಾಯಕರು, ಕಾರ್ಯಕರ್ತರು ಕೋಲಾರದಲ್ಲಿಯೇ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯ ಮಾಡಿದ್ದರಿಂದ ಇಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಚ್ಚಾಟಿತ ಶಾಸಕ ಶ್ರೀನಿವಾಸ ಮನೆಗೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ‌ಒಪ್ಪಿಗೆ ಪಡೆದು ಒಂದೇ ಕಡೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.
ಕುರುಬ ಸಮುದಾಯವನ್ನು ಇಬ್ಬಾಗ ಮಾಡುತ್ತಿದ್ದಾರೆ ಎಂಬ ವರ್ತೂರು ಹೇಳಿಕೆ ವಿಚಾರ‌ವಾಗಿ ಪ್ರತಿಕ್ರಿಯಿಸಿದ ಅವರು, ಕುರುಬ ಸಮುದಾಯದಿಂದಲೇ‌ ಗೆಲ್ಲಲು ಆಗುತ್ತಾ? ಗೆಲ್ಲಲು ಎಲ್ಲಾ ಸಮುದಾಯದ ಬೆಂಬಲವೂ ಬೇಕು ಎಂದರು. ಇನ್ನು ಕೋಲಾರದಲ್ಲಿ‌ ಬಣ ರಾಜಕೀಯ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ‌ ಗುಂಪುಗಾರಿಕೆ‌ ಇಲ್ಲ. ಅಭಿಪ್ರಾಯ ಭೇದ ಇರಬಹುದು ಅಷ್ಟೇ. ಕುಟುಂಬದಲ್ಲಿ ಇರಲ್ವಾ? ಗಂಡ ಹೆಂಡತಿ ನಡುವೆ ಹಾಗೇ ಎಂದರು.