ಸಿದ್ದರಾಮಯ್ಯ ಸರ್ಧೆಗೆ ಅಭ್ಯಂತರ ಇಲ್ಲ: ಮುನಿಯಪ್ಪ

ಮುನಿಯಪ್ಪ
Advertisement

ಕೋಲಾರ: ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಅಪಾರ ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಹೇಳಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ವಿಚಾರದ ಕುರಿತು ನನಗೆ ಅಭ್ಯಂತರ ಇಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ‌ಯೂ ನಾನು ಇದ್ದೀನಿ. ಈ ವಿಚಾರದ ಬಗ್ಗೆ ಇತಿಮಿತಿಯಲ್ಲಿ‌ ಮಾತನಾಡುತ್ತೇನೆ. ಪ್ರದೇಶ ಕಾಂಗ್ರೆಸ್ ಎಐಸಿಸಿಯಲ್ಲಿ ಸ್ಕ್ರೀನಿಂಗ್ ಕಮೀಟಿಯಲ್ಲಿ ಅದು ತೀರ್ಮಾವಾಗಬೇಕು. ನೀವೇ ಅಭ್ಯರ್ಥಿ ಆಗುವುದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು. ಜತೆಗೆ ಸಿದ್ದರಾಮಯ್ಯರನ್ನು ಸಭೆಯಲ್ಲಿ ಹಾಡಿ ಹೊಗಳಿದರು.