ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್

Advertisement

ಬೆಳಗಾವಿ: ಶ್ರೀರಾಮ್‌ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿಟಕರ ಮೇಲೆ ಫೈರಿಂಗ್ ಮಾಡಿದ ಘಟನೆ ಹಿಂಡಲಗಾ ಬಳಿ ಸಂಜೆ ೭.೪೫ ರ ಸುಮಾರಿಗೆ ನಡೆದಿದೆ.
ಸುಮಾರು ಮೂವರಿದ್ದ ಗುಂಪು ಈ ಫೈರಿಂಗ್ ಮಾಡಿದೆ ಎಂದು ಗೊತ್ತಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ಮೂವರು ಚಲಿಸುತ್ತಿದ್ದ ವಾಹನದ ಮೇಲೆ ಫೈರಿಂಗ್ ಮಾಡಿದ್ದಾರೆ. ಹೀಗಾಗಿ ವಾಹನದಲ್ಲಿದ್ದ ಕೋಕಿಟಕರ ಅವರ ಗದ್ದಕ್ಕೆ ಬುಲೆಟ್ ತಗುಲಿ ಚಾಲಕನ ಕೈಗೂ ತಾಗಿದೆ. ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರವಿ ಕೋಕಿಟಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸಿಸಿಟವಿ ಪರಿಶೀಲನೆ ನಡೆಸುತ್ತಿದ್ದಾರೆ.

ನಾಳೆ ರಾಜ್ಯಾದ್ಯಂತ ಪ್ರತಿಭಟನೆ

ಶ್ರೀರಾಮ ಸೇನೆ ಬೆಳಗಾವಿ ಜಿಲ್ಲಾ ಘಟನಕದ ಅಧ್ಯಕ್ಷ ರವಿ ಕೋಕಿಟಕರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿರುವ ಪ್ರಮೋದ ಮುತಾಲಿಕ್‌ ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ನಿಮ್ಮಗಳ ಗುಂಡಿಗೆ ನಾವು ಹೆದರುವುದಿಲ್ಲ ಎಂದಿದ್ದಾರೆ.