ಹಾವೇರಿ: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದ ಪ್ರವೇಶ ದ್ವಾರದ ಬಳಿ ಮಾಹಿತಿ ಫಲಕ ಅಳವಡಿಸಲಾಗಿದೆ.
ಪುಸ್ತಕ ಮಳಿಗೆ, ಊಟದ ವ್ಯವಸ್ಥೆ, ಮುಖ್ಯ ವೇದಿಕೆ, ಶೌಚಾಲಯ, ನೋಂದಣಿ ಕೇಂದ್ರಗಳು ಸೇರಿದಂತೆ ವಿವಿಧ ಕಡೆಗೆ ಹೋಗುವ ಮಾರ್ಗ ತೋರಿಸಲಾಗಿದೆ. ಸಮ್ಮೇಳನದ ಮಾಹಿತಿಯನ್ನೊಳಗೊಂಡ ಮಾಹಿತಿ ಫಲಕ ಜನರಿಗೆ ಅನುಕೂಲವಾಯಿತು.