ನಿಮ್ಮ ನಿಯತ್ತಿನ ಸೇವಕ: ಬೊಮ್ಮಾಯಿ

cm bommai
Advertisement

ಹಾವೇರಿ: ನಾನು ನಿಮ್ಮ ನಿಯತ್ತಿನ ನಿಮ್ಮ ಪ್ರಾಮಾಣಿಕ ಸೇವಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ನಾಯಿ ಪದ ಬಳಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿ ನಾನು ನಿಮ್ಮ ನಿಯತ್ತಿನ ಎನ್ನುತ್ತಿದ್ದಂತೆಯೇ ಜನರು ಆ ಕಡೆಯಿಂದ ಕೂಗಿದರು.
ಮಾತು ಮುಂದುವರಿಸಿದ ಸಿಎಂ ನಾನು ನಿಮ್ಮ ನಿಯತ್ತಿನ ಪ್ರಾಮಾಣಿಕ ಸೇವಕ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಟೀಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದಂತಿತ್ತು.