೨ಎ ಮೀಸಲಾತಿಗೆ 24 ಗಂಟೆಯ ಗಡವು ನೀಡಿದ ಯತ್ನಾಳ

ಯತ್ನಾಳ
Advertisement

ಬೆಳಗಾವಿ: ತಾಯಿಯ ಮೇಲೆ ಆಣೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ೨೪ ತಾಸಿನೊಳಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಯ ಎಲ್ಲ ಸ್ಥಾನಮಾನಗಳನ್ನು ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಡುವು ನೀಡಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಸಮಾಜಕ್ಕೆ ೨ಡಿ ಪಂಚಮಸಾಲಿಗಳಿಗೆ ಸಿಕ್ಕ ನ್ಯಾಯವೋ ಅನ್ಯಾಯವೋ? ಎಂಬ ಕುರಿತ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ೨೪ ಗಂಟೆಯೊಳಗೆ ಸಮಾಜಕ್ಕೆ ೨ಎ ಮೀಸಲಾತಿ ಕಲ್ಪಿಸದಿದ್ದರೆ ಜ. ೧೩ರಂದು ಮುಖ್ಯಮಂತ್ರಿಗಳು ಸ್ಪರ್ಧಿಸುವ ಹಾವೇರಿ ಜಿಲ್ಲೆ ಶಿಗ್ಗಾಂವ ಕ್ಷೇತ್ರದಿಂದಲೇ ಪಂಚಮಸಾಲಿ ಹೋರಾಟ ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಅಂತಿಮ ಹೋರಾಟ ಇದಾಗಲಿದೆ ಎಂದು ಯತ್ನಾಳ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.