ಬೈಲಹೊಂಗಲ: ಕ್ಷುಲಕ ಕಾರಣಕ್ಕೆ ವ್ಯಕ್ತಿ ಕೊಲೆ ಮಾಡಿದ ಘಟನೆ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮಂಜುನಾಥ ರುದ್ರಪ್ಪ ಸುಣಗಾರ (45) ಕೊಲೆಯಾದವ. ಅಜಯ ಗುರುಬಸಯ್ಯ ಹಿರೇಮಠ (26) ಕೊಲೆ ಆರೋಪಿ. ಇಬ್ಬರು ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿ ಅಜೇಯ ಗುರುಬಸಯ್ಯ ಹಿರೇಮಠ ಕಲ್ಲಿನಿಂದ ಮಂಜುನಾಥನನ್ನು ಜಜ್ಜಿ ಕೊಲೆ ಮಾಡಿ ತಲೆ ಮರೆಯಿಸಿಕೊಂಡಿದ್ದಾನೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಲೆ ಮರೆಯಿಸಿಕೊಂಡ ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬಿಸಿದ್ದಾರೆ.