ನಾನೂ ಕಳಸಾ ನಾಲಾ ಹೋರಾಟದ ಭಾಗಿದಾರ: ಮುಖ್ಯಮಂತ್ರಿ

Advertisement

ನವಲಗುಂದ : ಕಳಸಾ ನಾಲ ಯೋಜನೆಗೆ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇಲ್ಲಿನ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಶನಿವಾರ ಸಂಜೆ ವಿಜಯಪುರಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲು ತೆರಳುವಾಗ ಮಾರ್ಗ ಮಧ್ಯೆ ಹುತಾತ್ಮ ರೈತರ ಪುತ್ಥಳಿಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರು.
ಇವತ್ತು ನಾನು ಮುಖ್ಯಮಂತ್ರಿಯಾಗಿ ಈ ರೈತ ವೇದಿಕೆಗೆ ಬಂದಿಲ್ಲ. ನಾನು ಹೋರಾಟದ ಭಾಗವಾಗಿ ಬಂದಿದ್ದೇನೆ. ಹಿಂದೆ ಈ ಹೋರಾಟಕ್ಕೆ ನಾನೇ ರೈತರ ಜೊತೆ ಪಾದಯಾತ್ರೆ ಮಾಡಿದ್ದೆ ಎಂದು ನೆನಪಿಸಿಕೊಂಡರು.
ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆಯ ಡಿಪಿಆರ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಮೂಲಕ ರೈತರ ಬಹುದಿನದ ಬೇಡಿಕೆ ಈಡೇರೀಸಿದ್ದೇವೆ ಎಂದರು.
ಇದಕ್ಕೆ ಕಾರಣಿಭೂತರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗಜೇಂದ್ರಸಿಂಗ್ ಶೇಖಾವತ್ ಹಾಗೂ ನೀರಿಗಾಗಿ ನಿರಂತರ ಹೋರಾಟ ಮಾಡಿದ ರೈತರ ಕುಲಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಭಾಗಿ, ಎಸ್. ಬಿ. ದಾನಪ್ಪಗೌಡ್ರ, ರಾಯನಗೌಡ ಪಾಟೀಲ, ಮಹಾಂತೇಶ ಕಲಾಲ, ಸುಭಾಸಚಂದ್ರಗೌಡ ಪಾಟೀಲ, ಅಡಿವೆಪ್ಪ ಶಿರಸಂಗಿ, ಮಲ್ಲೇಶ್ ಉಪ್ಪಾರ, ಸಿದ್ದಪ್ಪ ಜನ್ನರ, ಗಂಗಪ್ಪ ಸಂಗಟಿ, ರವಿ ತೋಟದ ಅನೇಕ ರೈತರು ಉಪಸ್ಥಿತರಿದ್ದರು.