ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ: ಯುವತಿ ಸಾವಿಗೆ ಕಾರಣ ಆರೋಪ

SK EDIT ರಿಮ್ಸ ರೋಧನೆ
Advertisement

ರಾಯಚೂರು: ಮೂಗಿನ ಶಸ್ತ್ರ ಚಿಕಿತ್ಸೆ ನಿರ್ವಹಣೆ ಸಂದರ್ಭದಲ್ಲಿ ರಿಮ್ಸ್ ಆಸ್ಪತ್ರೆ‌ ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ ಪಾಲಕರು, ಸಂಬಂಧಿಕರು ಪ್ರತಿಭಟನೆ ನಡೆಸಿದರು.
ರಾಯಚೂರಿನ ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ಮೂಗಿನ ಶಸ್ತ್ರ ಚಿಕಿತ್ಸೆಗೆ ಬುಧವಾರ ದಾಖಲಾಗಿದ್ದ ತಾಲೂಕಿನ ಅಪ್ಪನ ದೊಡ್ಡಿ ರಾಜೇಶ್ವರಿ ಎನ್ನುವ ಯುವತಿ ಮೃತಳಾಗಿದ್ದಾಳೆ. ಶುಕ್ರವಾರ ರಾತ್ರಿ ಮೂಗಿನ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು ಮಾಹಿತಿ ತಿಳಿಸದೆ ಏಕಾಏಕಿ ಮಧ್ಯರಾತ್ರಿ ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದಾಗ ಪಾಲಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ತಮ್ಮ‌ ಸಂಬಂಧಿಕರು, ಸಮಾಜದವರ ಗಮನಕ್ಕೆ ವೈದ್ಯರ ನಿರ್ಲಕ್ಷ ಕಾರಣ ಎಂದು ತಿಳಿಸಿದಾಗ ಮೃತ ರಾಜೇಶ್ವರಿ ಅವರ ತಾಯಿಗೆ ಬೆಂಬಲಿಸಿ ಬೆಳಿಗ್ಗೆ ವೈದ್ಯರ ವಿರುದ್ಧ ಆಕ್ರೋಶಗೊಂಡು ಧರಣಿ ನಡೆಸಿದರು. ಯುವತಿಯ ಸಾವಿಗೆ ವೈದ್ಯರೆ ಕಾರಣ. ಅವರ ವಿರುದ್ಧ ಕ್ರಮ‌ ವಹಿಸಲು ಕುಟುಂಬಸ್ಥರು, ಅವರ ಸಮಾಜದ ಮುಖಂಡರು ಧರಣಿ ಮುಂದುವರಿಸಿದರು.‌
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಧಾನ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನಾ ನಿರತರು ಪಟ್ಟು ಸಡಿಲಿಸದೇ ಶವ ಪಡೆಯದೆ ಧರಣಿ ಮುಂದುವರಿಸಿದರು. ಆಸ್ಪತ್ರೆಗೆ ಬಂದ ರೋಗಿ ಸಂಬಂಧಿಕರು ಸಹಿತ ರಿಮ್ಸ್ ಆಸ್ಪತ್ರೆಯ ವೈದ್ಯರ, ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.