ಕ್ಷುಲಕ‌ ಕಾರಣಕ್ಕೆ ಚಾಕು ಇರಿತ: ವ್ಯಕ್ತಿ‌ ಗಂಭೀರ

murder
Advertisement

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಆಯೋಧ್ಯಾ ನಗರದ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ಬುಧವಾರ ನಡೆದಿದ್ದು, ಐವರನ್ನು ಕಸಬಾಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಗರದ ಸುನೀಲ ಕೈರಾಯಿ ಎಂಬುವನಿಗೆ ಚಾಕುವಿನಿಂದ ಇರಿದ ಘಟನೆ ಈಶ್ವರ ನಗರದಲ್ಲಿ ನಡೆದಿದೆ.
ಗಾಯಗೊಂಡಿರುವ ಸುನೀಲ್‌ನನ್ನು ಕಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಅತಿರೇಕಕ್ಕೆ ಹೋದಾಗ ಚಾಕುವಿನಿಂದ ಇರಿದು ಆರೋಪಿತರು ಪರಾರಿಯಾಗಿದ್ದರು. ಘಟನೆ ಮಾಹಿತಿ ತಿಳಿದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.