ವಾಣಿಜ್ಯನಗರಿಯಲ್ಲಿ ಶ್ರೀಕೃಷ್ಣ ವೈಭವ

ಕೃಷ್ಣ
Advertisement

ಹುಬ್ಬಳ್ಳಿ: ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಂಭ್ರಮ, ಸಡಗರ, ವೈಭವಯುತವಾಗಿ ಆಚರಣೆ ಮಾಡಲಾಯಿತು.
ಸಮೀಪದ ರಾಯಾಪುರ ಶ್ರೀ ಕೃಷ್ಣ ಬಲರಾಮ ಮಂದಿರ, ದೇಶಪಾಂಡೆ ನಗರ ಶ್ರೀಕೃಷ್ಣ ದೇವಸ್ಥಾನ, ಗುಜರಾತ್ ಭವನದ ಶ್ರೀಕೃಷ್ಣ ದೇವಸ್ಥಾನ, ದೇಸಾಯಿ ಪಾರ್ಕಿನಲ್ಲಿರುವ ಗೀತಾ ಮಂದಿರ, ಲ್ಯಾಮಿಂಗ್ಟನ್ ರಸ್ತೆಯ ಶ್ರೀಕೃಷ್ಣ ಮಂದಿರ ಸೇರಿದಂತೆ ಹತ್ತು ಹಲವು ಕಡೆಗಳಲ್ಲಿ ಸಡಗರದಿಂದ ನಡೆಯಿತು.
ಈ ವರ್ಷ ಎರಡು ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅವಕಾಶ ಇದ್ದುದ್ದರಿಂದ ಗುರುವಾರ ದಿನವೂ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ಕೃಷ್ಣ ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಬಡಾವಣೆಗಳಲ್ಲಿ ಆಚರಿಸಿದ್ದರು. ಶುಕ್ರವಾರವೂ ಎಲ್ಲೆಡೆ ತೊಟ್ಟಿಲು ಸೇವೆ, ಉಯ್ಯಾಲೆ ಸೇವೆ, ಅಲಂಕಾರ ಸೇವೆ, ಮಕ್ಕಳಿಗೆ ಕೃಷ್ಣನ ವೇಷ ಭೂಷಣ ಸ್ಪರ್ಧೆ, ಗಡಿಗೆ ಒಡೆಯುವ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೋಷಕರು ತಮ್ಮ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣನ ವೇಷ ಭೂಷಣ ಹಾಕಿದರು. ಗೋಪಾಲ ಕೃಷ್ಣ, ರಾಧೆ ಕೃಷ್ಣ ನಾನಾ ಬಗೆಯಲ್ಲಿ ಮಕ್ಕಳು ಗಮನ ಸೆಳೆದರು

ಕೃಷ್ಣ