ಹುಬ್ಬಳ್ಳಿ: ಕಾಂಗ್ರೆಸ್ ತಮ್ಮ ಅಧಿಕಾರ ಇದ್ದಾಗ ಮಹದಾಯಿ ಸಮಸ್ಯೆ ಬಗ್ಗೆ ಕಾಳಜಿ ವ್ಯಕ್ತಪಡಿಸಿಲ್ಲ. ಹೀಗಾಗಿ ಮಹದಾಯಿ ಸಮಾವೇಶ ಮಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಇಲ್ಲ. ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಕುರಿತು ಈ ಹಿಂದೆ ಕುಡಿಯುವ ನೀರಿಗಾಗಿ ಮನಮೋಹನ್ ಸಿಂಗ್ ಅವರಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದೇವು ಆಗ ಮಾಡಲಿಲ್ಲ. ಈಗ ನಮ್ಮ ಸರಕಾರದ ಅವಧಿಯಲ್ಲಿ ಯೋಜನೆ ಜಾರಿಗೆ ಕೊನೆಯ ಹಂತದ ತೀಮರ್ಾನ ತೆಗೆದುಕೊಳ್ಳಲು ಸಜ್ಜಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಅಡುಗೆ ಆದ ಮೇಲೆ ಒಗ್ಗರಣೆ ಹಾಕಿ ಅಡುಗೆ ಮಾಡುವವರು ನಾವೇ ಅಡುಗೆ ಮಾಡಿದ್ದೇವೆ ಎಂಬ ವರ್ತನೆ ಕಾಂಗ್ರೆಸ್ನವರದ್ದಾಗಿದೆ. ಕಾಂಗ್ರೆಸ್ನವರಿಗೆ ರಾಜಕೀಯ ಮಾಡಿ ಗೊತ್ತಿದೆ. ಕೆಲಸ ಮಾಡಿ ಗೊತ್ತಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಯಾವುದೇ ಅವಧಿ ಪೂರ್ವ ಚುನಾವಣೆಗೆ ಹೋಗಲ್ಲ. ಯಾವಾಗ ಚುನಾವಣೆ ಮಾಡಿದರೂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಥಂಪಿಂಗ್ ಮೇಜಾರಿಟಿಯಲ್ಲಿ ಮತ್ತೆ ಗೆಲ್ಲುತ್ತೇವೆ ಎಂದು ಹೇಳಿದರು.