ಕೊಪ್ಪಳ: ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಜಿಲ್ಲೆಯ ಅಳವಂಡಿ ಸರ್ಕಾರಿ ಬಾಲಕಿಯರ ಪೌಢಶಾಲೆಯ ಹಾಸ್ಟೆಲ್ನಲ್ಲಿ ಇಂದು ನಡೆದಿದೆ.
ತೀವ್ರ ಅಸ್ವಸ್ಥರಾಗಿರುವ ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಶಾಲೆಯ ಹಾಸ್ಟೆಲ್ನಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿನಿಯರು ರಾತ್ರಿ ನಿತ್ರಾಣಗೊಂಡಿದ್ದರು. ಇಂದು ಅವರಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಗೊಂಡು ವಾಂತಿ ಉಲ್ಬಣಗೊಂಡಿದೆ.
ಇಂದು ಬೆಳಗ್ಗೆ ಹಾಸ್ಟೆಲ್ನಲ್ಲಿ ತಿಂಡಿ ಸೇವಿಸಿದ ನಂತರವೂ ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಲು ಆರಂಭಿಸಿದರು. ಅಳವಂಡಿ ಪೊಲೀಸರು, ಗ್ರಾಮದ ಪ್ರಮುಖರು, ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.