ಹುಬ್ಬಳ್ಳಿ: ಕತಾರ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿ ಅರ್ಜಿಂಟೀನಾ ಚಾಂಪಿಯನ್ 3 ನೇ ಬಾರಿಗೆ ಹೊರಹೊಮ್ಮಿತು.
ಪಂದ್ಯದ ರೋಚಕ ಕ್ಷಣಗಳಲ್ಲಿ ಅರ್ಜೆಂಟೀನಾ ತಂಡ ತೋರಿದ ಅಚ್ಷರಿ ಪ್ರದರ್ಶನವು ಫಿಫಾ ವಿಶ್ವಕಪ್ ಗೆ ಮುತ್ತಿಕ್ಕಲು ಸಾದ್ಯವಾಯಿತು.
ಹೆಚ್ಚುವರಿ ಸಮಯ ನೀಡಿದರೂ ಪಂದ್ಯ 3-3 ಅಂತರದಿಂದ ಡ್ರಾಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಮೆಸ್ಸಿ ತಂಡ 4-2 ಗೋಲು ದಾಖಲಿಸುವ ಮೂಲಕ ಈ ಬಾರಿ ಫಿಫಾ ವಿಶ್ವಕಪ್ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಹಿಂದೆ 1978 ರಲ್ಲಿ ನೆದರ್ ಲ್ಯಾಂಡ್ ನಲ್ಲಿ, 1986 ರಲ್ಲಿ ಮೆಕ್ದಿಕೋದಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ 36 ವರ್ಷಗಳ ನಂತರ ಚಿನ್ನದ ಟ್ರೋಪಿ ಗೆಲ್ಲುವ ಮೂಲಕ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ 3 ನೇ ಗೆಲುವು ದಾಖಲಿಸಿತು.
- ಲಿಯೋನೆಲ್ ಮೆಸ್ಸಿ ನಿವೃತ್ತಿ
ಅರ್ಜೆಂಟೀನಾ ಸ್ಟಾರ್ ಆಟಗಾರ 35 ವರ್ಷದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಫೈನಲ್ ನೊಂದಿಗೆ ನಿವೃತ್ತರಾದರು.
ಮೆಸ್ಸಿ 5 ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಆಡಿದ್ದರೂ ಇದು ಅವರ ಮೊದಲ ವಿಶ್ವಕಪ್ ಗೆಲುವು. - ಮೆಸ್ಸಿ ಮುಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
ಈ ಬಾರಿ ವಿಶ್ವಕಪ್ ಫುಟ್ಬಾಲ್ ನಲ್ಲಿ 7 ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯು ಲಭಿಸಿತು. ಈ ಹಿಂದೆ 2014 ರಲ್ಲಿ ಈ ಪ್ರಶಸ್ತಿಗ ಮೆಸ್ಸಿ ಭಾಜನರಾಗಿದ್ದರು.
ಫೈನಲ್ ನಲ್ಲಿ ಪರಾಜಿತ ಫ್ರಾನ್ಸ್ ತಂಡದ ಕೈಲಿಯನ್ ಎಂಬಾಪ್ಪೆ ಗೋಲ್ಡನ್ ಬೂಟ್, ಅರ್ಜೆಂಟೀನಾದ ಎಮಿ ಮಾರ್ಟಿನೋಜ್ ಗೆ ಗೋಲ್ಡನ್ ಗ್ಲೋ, ಎಂಜೊ ಫರ್ನಾಂಡೀಸ್ ಗೆ ಯುವ ಆಟಗಾರ ಪ್ರಶಸ್ತಿ ಲಭಿಸಿವೆ.
. - 56 ವರ್ಷಗಳ ನಂತರ 2 ನೇ ಬಾರಿಗೆ ಹ್ಯಾಟ್ರಿಕ್ ಗೋಲು
ಫ್ರಾನ್ಸ್ ನ ಫುಟ್ಬಾಲ್ ತಂಡದ ಸ್ಟಾರ್ ಅಟಗಾರ ಎಂಬಪ್ಪೆ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದಾರೆ. ಎಂಬಪ್ಪಿ ಅವರ ಆಕ್ರಮಣಕಾರಿ ಆಟದ ನಡುವೆಯೂ ಫ್ರಾನ್ಸ್ ನ ತಂಡವು ವಿಶ್ವಕಪ್ ಫೈನಲ್ ನಲ್ಲಿ ಸೋಲು ಕಂಡಿದೆ.
56 ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದ ಆಟಗಾರ ಈ ರೀತಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. - ಫಿಫಾ ಯಾವ ತಂಡ ಎಷ್ಟು ಬಾರಿ ಗೆಲುವು
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬ್ರೆಜಿಲ್ 5 , ಬಾರಿ, ಜರ್ಮನಿ ಮತ್ತು ಇಟಲಿ ತಲಾ 4 ಬಾರಿ, ಫ್ರಾನ್ಸ್, ಉರುಗ್ವೆ ತಲಾ 2 ಬಾರಿ, ಇಂಗ್ಲೆಂಡ್ ಮತ್ತು ಸ್ಪೇನ್ ತಲಾ 1 ಬಾರಿ ವಿಶ್ವಕಪ್ ಗೆದ್ದಿವೆ.