ಫೇಸ್‌ ಶೀಲ್ಡ್‌ಗೆ ಮೊರೆ ಹೋದ ಮಹಾ ಸಚಿವ

Advertisement

ಮುಂಬಯಿ: ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಚಂದ್ರಕಾಂತ್‌ ಪಾಟೀಲ್‌ ಶನಿವಾರ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸುವಾಗ ಫೇಸ್‌ ಶೀಲ್ಡ್‌ ಧರಿಸಿದ್ದರು.
ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮತ್ತೆ ಮಸಿ ಎರಚಬಹುದೆಂಬ ಸಾಧ್ಯತೆ ಹಿನ್ನೆಲೆಯಲ್ಲಿ ಅವರು ಫೇಸ್‌ ಶೀಲ್ಡ್‌ ಧರಿಸಿಕೊಂಡೇ ಓಡಾಡುತ್ತಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ಚಂದ್ರಕಾಂತ್‌ ಪಾಟೀಲ್‌ ಮುಖಕ್ಕೆ ಮಸಿ ಬಳಿದು ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.