ಹುಬ್ಬಳ್ಳಿ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹುಬ್ಬಳ್ಳಿ ಧಾರವಾಡ ಉತ್ತರ ವಿಭಾಗದ ಎಸಿಪಿಯಾಗಿದ್ದ ವಿನೋದ್ ಮುಕ್ತೇದಾರ ಅವರನ್ನು ಶನಿವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧಡೆ ಕಾರ್ಯನಿರ್ವಸುತ್ತಿದ್ದ 45 ಜನ ಡಿವೈಎಸ್ ಪಿ (ಸಿವಿಲ್) ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಉತ್ತರ ವಿಭಾಗದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಎಸಿಪಿ ವಿನೋದ್ ಮುಕ್ತೇದಾರ್ ಅವರನ್ನ ಕೂಡ ವರ್ಗಾವಣೆ ಮಾಡಲಾಗಿದ್ದು, ಸದ್ಯ ಅವರನ್ನ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ,
ಅವರ ಸ್ಥಾನಕ್ಕೆ ಯಾವುದೇ ಅಧಿಕಾರಿ ನೇಮಕ ಆಗಿಲ್ಲ. ಹೀಗಾಗಿ ನೂತನ ಎಸಿಪಿ ಯಾರು ಎನ್ನುವುದನ್ನ ಕಾದು ನೋಡಬೇಕಾಗಿದೆ.
ಜೊತೆಗೆ ಬೆಂಡಿಗೇರಿ ಪೊಲೀಸ್ ಠಾಣೆಗೆ ಪೊಲೀಸ್ ಇನ್ಸಪೆಕ್ಟರ್ ಬಸಪ್ಪ ಬುದ್ನಿ ಅವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಇವರು ಎಸಿಬಿಯಲ್ಲಿದ್ದರು.