ನಾನು ಏಕಾಂಗಿಯಲ್ಲ: ಡಿ.ಕೆ.ಶಿವಕುಮಾರ

ಡಿಕೆಶಿ
Advertisement

ಕೊಪ್ಪಳ( ಕುಷ್ಟಗಿ): ಈಗಲೂ ಮಂಗಳೂರು ಬ್ಲಾಸ್ಟ್ ಪ್ರಕರಣದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಅದರಲ್ಲಿ ಯಾವುದೇ ಭಯವಿಲ್ಲ. ಆದರೆ, ಬಿಜೆಪಿಗೆ‌ ಯಾಕೆ ಡಿಕೆಶಿನೇ‌ ಟಾರ್ಗೆಟ್ ಆಗಿರುತ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಕಮಿಷನರ್ ತನಿಖೆ ಮಾಡದೆ ಆರೋಪಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು…? ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ ಬ್ಲಾಸ್ಟ್ ಪ್ರಕರಣ ನಡೆದಿದೆ. ಭ್ರಷ್ಟಾಚಾರ ವಿಷಯ ಡೈವರ್ಟ್ ಮಾಡಲು ಬಿಜೆಪಿ ಆಡಿದ ಆಟ ಇದಾಗಿದೆ. ಈಗಲೂ ದಕ್ಷಿಣ ಕನ್ನಡ- ಶಿವಮೊಗ್ಗ ಘಟನೆಗಳಿಂದ ಭ್ರಷ್ಟಾಚಾರ ಡೈವರ್ಟ್ ಮಾಡಲು ಹೊರಟಿದೆ. ಈ ವಿಷಯದಲ್ಲಿ ನನಗೆ ಯಾರ ಸಪೋರ್ಟ್ ಬೇಕಿಲ್ಲ. ನಾನು ನನ್ನ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ ಎಂದರು.