ಹುಬ್ಬಳ್ಳಿ : ಬಡವರಿಗೆ ಪ್ರಾಥಮಿಕವಾಗಿ ಉತ್ತಮ ಚಿಕಿತ್ಸೆ ಕಲ್ಪಿಸಲು ನಮ್ಮ ಕ್ಲಿನಿಕ್ ಆರಂಭ ಮಾಡುತ್ತಿದ್ದೇವೆ. 437 ಕ್ಲಿನಿಕ್ ಇಡೀ ರಾಜ್ಯದಲ್ಲಿ ಮಾಡುತ್ತಿದ್ದು, ಮೊದಲ ಹಂತವಾಗಿ 100 ಕ್ಲಿನಿಕ್ ಇಂದು ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾವೆಲ್ಲ ಚಿಕ್ಕವರಿದ್ದಾಗ ಆಸ್ಪತ್ರೆಗೆ ಹೋಗುತ್ತಿದ್ದೆವು. ಡಿಸ್ಪೆನ್ಸರಿಗಳಿದ್ದವು. ಎಂಬಿಬಿಎಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದರುಮ ಸಣ್ಣಪುಟ್ಡ ತಪಾಸಣೆ ಮಾಡುತ್ತಿದ್ದರು. ಆದರೆ, ಈಗ ಅದೆಲ್ಲ ಇಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ದೊಡ್ಡ ಆಸ್ಪತ್ರೆಗೇ ಹೋಗಿ ಎಡ್ಮಿಟ್ ಆಗುವ ಕಾಲ ಎಂದರು.ಹೀಗಾಗಿ, ಬಡ ಜನರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆ ಪಡೆಯುವುದು ಕಷ್ಟವಾಗಬಾರದು ಎಂಬ ಉದ್ದೇಶದಿಂದ ನಮ್ಮ ಕ್ಲಿನಿಕ್ ಆರಂಭಿಸಿದ್ದೇವೆ ಎಂದರು.
ಬರೀ ತಪಾಸಣೆ, ಔಷಧಿ ಕೊಡುವುದು ಮಾತ್ರವಲ್ಲ. ರಕ್ತ ಪರೀಕ್ಷೆ, ಶುಗರ್ ಟೆಸ್ಟ್ ಸೇರಿದಂತೆ ಅರೋಗ್ಯಕ್ಕೆ ಸಂಬಂಧಪಟ್ಡ ಪರೀಕ್ಷೆಗಳನ್ನು ಮಾಡುವ ಘಟಕಗಳನ್ನು ಇದಕ್ಕೆ ಜೋಡಿಸುವ ಚಿಂತನೆ ಇದೆ. ಟೆಲಿ ಮೆಡಿಷನ್ ನ್ನು ಕೂಡಾ ಈ ಯೋಜನೆಗೆ ಜೋಡಿಸಲಾಗುತ್ರಿದೆ ಎಂದು ವಿವರಿಸಿದರು. ಮೂರು ತಿಂಗಳು ಇದರ ಕಾರ್ಯಕ್ಷಮತೆ ನೋಡಿಕೊಂಡು ಉನ್ನತೀಕರಣಕ್ಕೆ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ಹೇಳಿದರು.