ದಾವಣಗೆರೆ: ಅಯೋಧ್ಯೆಯ ರಾಮಮಂದಿರದ ಕನಸು ಈಡೇರುತ್ತಿದ್ದು, ಈಗ ನಮ್ಮ ಮುಂದಿರುವ ರಾಮರಾಜ್ಯದ ಕನಸು ನನಸಾಗಬೇಕಾದರೆ ಅದಕ್ಕೆ ನಿರಂತರ ಪ್ರಯತ್ನ ಬೇಕಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೂಚ್ಯವಾಗಿ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಹಳ ಕಾಲದ ಭಾರತೀಯರ ಕನಸಾಗಿದ್ದ ರಾಮಮಂದಿರದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. 2024ರ ಜನವರಿಯಲ್ಲಿ ರಾಮದೇವರ ಪ್ರದರ್ಶನ ನಡೆಯಲಿದೆ. ಆದರೆ, ನಮ್ಮ ಮುಂದಿರುವ ರಾಮರಾಜ್ಯದ ಕನಸು ಕೂಡ ನನಸಾಗಲು ಎಲ್ಲರ ಪ್ರಯತ್ನ ಬೇಕಿದೆ ಎಂದರು.
ಧರ್ಮವೇ ಮೂರ್ತಿ ರೂಪದಲ್ಲಿ ಶ್ರೀರಾಮನ ಅವತಾರವಾಯಿತು. ಆವತ್ತು ರಾಮರಾಜ್ಯದ ನಿರ್ಮಾಣವಾಯಿತು. ನಾವು ಧರ್ಮದ ಹಾದಿಯಲ್ಲಿ ನಡೆದರೆ ರಾಮರಾಜ್ಯದ ಕನಸು ಕೂಡ ಈಡೇರಲಿದೆ ಎಂದು ತಿಳಿಸಿದರು.