ಚಾಮರಾಜನಗರ ಜಿಲ್ಲೆ: ಅಭಿವೃದ್ಧಿಗೆ ಮಹತ್ವಸಿಎಂ ಬೊಮ್ಮಾಯಿ

BASAVARAJ BOMAI
Advertisement

ಮೈಸೂರು: ಚಾಮರಾಜನಗರ ಜಿಲ್ಲೆಯೂ ಕೂಡ 31 ಜಿಲ್ಲೆಗಳ ಪೈಕಿ ಮಹತ್ವದ ಜಿಲ್ಲೆ. ನಿಸರ್ಗಭರಿತ, ಐತಿಹಾಸಿಕ ಗಡಿ ಜಿಲ್ಲೆಯಾಗಿದೆ. ಅಭಿವೃದ್ಧಿಗೆ ಮಹತ್ವ ಕೊಟ್ಟೇ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಯಾದ ನಂತರ ಮೂರನೇ ಬಾರಿಗೆ ಜಿಲ್ಲೆ ಭೇಟಿ ನೀಡುತ್ತಿದ್ದೇನೆ ಎಂದರು.

ಗಡಿವಿವಾದದ ಬಗ್ಗೆ ಚರ್ಚೆ ಕೇಂದ್ರ ಗೃಹ ಸಚಿವರು ಗಡಿವಿವಾದ ದ ಬಗ್ಗೆ ಚರ್ಚಿಸಲೆಂದೇ ಎರಡೂ ರಾಜ್ಯ ಗಳ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆದಿದ್ದಾರೆ. ಅಲ್ಲಿ ನಮ್ಮನಿಲುವಿನ ಬಗ್ಗೆ ಹೇಳುತ್ತೇವೆ. ಈಗಾಗಲೇ ರಾಜ್ಯ ಪುನರ್ ವಿಂಗಡನಾ ಕಾಯ್ದೆ, ಪ್ರಕ್ರಿಯೆ, ಸುಪ್ರೀಂ ಕೋರ್ಟ್ ಪ್ರಕರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ. ಸಂವಿಧಾನದಲ್ಲಿನ ಅವಕಾಶಗಳು ಮತ್ತು 2004 ರ ಪ್ರಕರಣ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡೇ ಇಲ್ಲ ಎಂಬ ಬಗ್ಗೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಡಲಿದ್ದೇನೆ ಎಂದರು.
ಮಾಂಡೋಸ್ ಚಂಡಮಾರುತ: ಬೆಳೆ ಹಾನಿ ಸಮೀಕ್ಷೆ
ಮಾಂಡೋಸ್ ಚಂಡ ಮಾರುತದಿಂದ ಕೆಲವು ತೊಂದರೆಗಳಗಿದ್ದು, ವಿಶೇಷವಾಗಿ ಬೆಳೆಗಳ ಮೇಲೆ ಆಗಿರುವ ಪ್ರಭಾವ ಏನೆಂದು ಸಮೀಕ್ಷೆ ಮಾಡಲಾಗುತ್ತಿದೆ. ರಾಗಿ, ಬೆಳೆದು ನಿಂತಿದೆ. ಕಾಟಾವು ಮಾಡಿದವರಿಗೆ ಕಷ್ಟವಾಗುತ್ತಿದೆ ಎಂಬ ವರದಿ ಬಂದಿದೆ. ಕೃಷಿ ಇಲಾಖೆಯಿಂದ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗುತ್ತಿದ್ದೇವೆ. ಅನಂತರ ಈ ಬಗ್ಗೆ ಚರ್ಚೆಯಾದರೆ, ಸಿದ್ಧತೆ ಮಾಡಿಕೊಂಡು ಹೋಗಿರುತ್ತೇನೆ ಎಂದರು.
ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತೇವೆ
ದೇಶದ ಗಡಿಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಸಂಘರ್ಷ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗ ಹಿಂದಿನಂಥ ಸರ್ಕಾರವಿಲ್ಲ. ರಕ್ಷಣಾ ಪಡೆಗಳೂ ಸನ್ನದ್ಧವಾಗಿವೆ. ಹಿಂದೆ ಯಾವುದೇ ತಯಾರಿಗಳಿರಲಿಲ್ಲ. ಅಂದಿನ ನಾಯಕತ್ವ ರಕ್ಷಣಾ ಪಡೆಗಳಿಗೆ ಯಾವುದೇ ನಿರ್ದೇಶನ ನೀಡಲಿಲ್ಲ. ಈಗ ಸ್ಪಷ್ಟ ನಿರ್ದೇಶನವಿದೆ. ವಿವಾದವಿದ್ದ ಸಂದರ್ಭದಲ್ಲಿ ಚೀನಾ ಮುನ್ನುಗ್ಗಿ ದಾಗ ಅಂದಿನ ನಾಯಕತ್ವ ರಕ್ಷಣಾ ಪಡೆಗಳಿಗೆ ನಿರ್ದೇಶನ ನೀಡಲಿಲ್ಲ. ರಸ್ತೆ, ಸೇತುವೆ, ಸಲಕರಣೆ ಮುಂತಾದ ಸಂಪರ್ಕ ಸಾಧನಗಳನ್ನು ಬಲಪಡಿಸಲಾಗಿದೆ. ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.