ಮನೆಯಲ್ಲಿ ಜನ ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು: ಕೋಟೆನಗರಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

ಕಳ್ಳತನ
Advertisement

ಬಾಗಲಕೋಟೆ: ಮನೆಯಲ್ಲಿ ಕುಟುಂಬಸ್ಥರು ಇರುವಾಗಲೇ ಅವರ ಗಮನಕ್ಕೆ ಬಾರದಂತೆ ರಾತೋ ರಾತ್ರಿ ಕಳ್ಳರು ಕನ್ನ ಹಾಕಿದ ಘಟನೆ ವಿದ್ಯಾಗಿರಿಯ ನಂದಿಕೇಶ್ವರ ಕಾಲನಿಯಲ್ಲಿ ನಡೆದಿದೆ.
ಸತೀಶ ಶಿರೋಳ ಸೇರಿ ನಾಲ್ವರು ಮನೆಯಲ್ಲಿ ಮಲಗಿರುವಾಗ ಮಧ್ಯರಾತ್ತಿ ಈ ಘಟನೆ ನಡೆದಿದೆ ಎಂದು ಕುಟುಂವಸ್ಥರು ಹೇಳುತ್ತಿದ್ದಾರೆ. ೨೦ ತೊಲಿ ಚಿನ್ನ, ೧೦ ತೊಲಿ ಬೆಳ್ಳಿ ಜತೆಗೆ ಎರಡು ಮೊಬೈಲಗಳನ್ನು ಕಳ್ಳರು ಎಗರಿಸಿದ್ದಾರೆ. ಅಲ್ಲದೇ ಸತೀಶ ಅವರ ಪಕ್ಕದ ಮನೆಯ ಬೀಗವನ್ನೂ ಕಳ್ಳರು ಹೊಡೆದಿದ್ದಾರೆ‌. ಅದೇ ಪ್ರದೇಶದ ೮ ಮನೆಗೆ ಕನ್ನ ಹಾಕಲು ಕಳ್ಳರು ಯತ್ನಿಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.
ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮನೆಯ ಬಳಿಯಲ್ಲಿರುವ ಬ್ರಿಡ್ಜ್ ಕೆಳಭಾಗದಲ್ಲಿ ಕಳ್ಳತನವಾಗಿರುವ ಕೆಲವು ವಸ್ತುಗಳು ಪತ್ತೆ ಆಗಿವೆ. ನವನಗರ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ‌.