ಚಿಂತಾಮಣಿ: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಯೋಧನಿಗೆ ಭೂಮಿ ಮಂಜೂರು ಮಾಡಲು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ಭೂದಾಖಲೆ ಉಪನಿರ್ದೇಶಕರ ಕಚೇರಿಯ ಸರ್ವೇಯರ್ ನಾಗರಾಜ್, ಡಿ ಗ್ರೂಪ್ ನೌಕರ ಪ್ರಕಾಶ, ರೈತ ಸಂಘದ ಮುಖಂಡ ಕದಿರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿರುವ ಆರೋಪಿಗಳು.
ರಾಯಪ್ಪಲ್ಲಿ ಗ್ರಾಮದ ಮಾಜಿ ಯೋಧ ಶಿವಾನಂದರೆಡ್ಡಿ ಕಳೆದ 20 ವರ್ಷಗಳಿಂದ ತನಗೆ ಬರಬೇಕಾಗಿದ್ದ ಭೂಮಿ ಮಂಜೂರಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಹಣಕ್ಕಾಗಿ ಇಲ್ಲಸಲ್ಲದ ನೆಪವೊಡ್ಡಿ ಕಾಲ ತಳ್ಳುತ್ತಿದ್ದರು. ಈ ಸಂಬಂಧ ನಿವೃತ್ತ ಯೋಧ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು.