ಎಲ್ಲ ಸಮುದಾಯಗಳು ಒಂದಾಗಬೇಕು – ಸತೀಶ ಜಾರಕಿಹೊಳಿ

Advertisement

ಬೆಂಗಳೂರು: ನಾವು ಎಲ್ಲ ಸಮುದಾಯಗಳು ಒಂದಾಗಬೇಕು, ಒಂದೇ ವೇದಿಕೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕೆಂದು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 8ರ ಐತಿಹಾಸಿಕ ʻಐಕ್ಯತಾ ಸಮಾವೇಶ’ದಲ್ಲಿ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕು, ಒಂದೇ ಪಕ್ಷದ ಜೊತೆಗಿರಬೇಕು ಎಂಬ ಸಂದೇಶ ನೀಡಲು ಈ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.