ಸಿದ್ದಾಪುರ: ತಾಲೂಕಿನ ಮನಮನೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಶ್ರೀ ಮಹಾಸತಿ (ಮಾಸ್ತೆಮ್ಮ) ದೇವಾಲಯದ ಅಧ್ಯಕ್ಷರಾಗಿದ್ದ ರಾಮ ಚೌಡ ನಾಯ್ಕ(೬೫) ಉದ್ದಿನಹಕ್ಲರಮನೆ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ರಾಮ ನಾಯ್ಕ ಅವರು ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ್ದರು. ಭಾನುವಾರ ಅವರ ಕಳೇಬರವನ್ನು ಮನೆಗೆ ತರುತ್ತಿದ್ದಂತೆ ಆಘಾತಕ್ಕೊಳಗಾಗಿದ್ದ ಅವರ ಬಾಳ ಸಂಗಾತಿ ಬಂಗಾರಮ್ಮ (೬೦) ಸಹ ಮರುದಿನ ಸೋಮವಾರ ಬೆಳಿಗ್ಗೆ ಅಸುನೀಗಿದರು. ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗದವರಿದ್ದಾರೆ.