ಗಡಿ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ

ಜೋಶಿ
Advertisement

ಹುಬ್ಬಳ್ಳಿ: ಕರ್ನಾಟಕ ಹಾಗೂ ಮಹಾರಾಷ್ಟç ಗಡಿ ವಿಚಾರವಾಗಿ ಎರಡು ರಾಜ್ಯಗಳ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಶಾಂತಿ, ನೆಮ್ಮದಿ, ಅಭಿವೃದ್ಧಿ ಬಯಸುತ್ತಿದ್ದಾರೆ. ಈ ನಡುವೆ ಗಡಿ ವಿಚಾರವಾಗಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಬಗೆಹರಿದ ವಿಷಯ. ಅದನ್ನು ಮುಂದೆ ಇಟ್ಟುಕೊಂಡು ಹೇಳಿಕೆ ನೀಡಿ, ನೆಮ್ಮದಿ ಕದಡುವುದು ಸರಿಯಲ್ಲ. ಈ ಬಾರಿ ಅಲ್ಲಿಯವರೇ ನಮ್ಮವರನ್ನು ಪ್ರಚೋದಿಸಿದ್ದಾರೆ. ಅವರು ಬಸ್ಸಿಗೆ ಮಸಿ ಬಳಿದರೆಂದು ನಾವು ಬಳಿಯುವುದು, ನಾವು ಮಸಿ ಬಳಿದೆವೆಂದರೆ ಅವರು ಬಳಿಯುವುದು ಸರಿಯಾದ ನಡೆಯಲ್ಲ ಎಂದು ಹೇಳಿದರು.
ಎರಡೂ ರಾಜ್ಯದವರು ಪರಸ್ಪರ ಹೊಂದಾಣಿಕೆಯಿAದ ನೆಲೆ ಕಂಡುಕೊAಡು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅಲ್ಲಿಯ ಹಳ್ಳಿ ಮಂದಿ ಇಲ್ಲಿ ಬರರು, ಇಲ್ಲಿಯವರು ಅಲ್ಲಿಗೆ ಹೋಗರು. ರಾಜಕೀಯ ಇರಲಿ, ಏನೇ ಇರಲಿ. ಇಂತಹ ವಿಷಯಗಳಿಂದ ಅವರು ಸಹ ಬೇಸತ್ತಿದ್ದಾರೆ. ದೇಶ ಒಂದು, ನಾವೆಲ್ಲರೂ ಒಂದು ಎನ್ನುವ ಮನೋಭಾವದಿಂದ ಬದುಕಬೇಕು. ಯಾರೇ ಆಗಲಿ ತಕ್ಷಣ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.