ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ

ವಿಜಯಪುರ
Advertisement

ವಿಜಯಪುರ : ಕೆಎಸ್ ಆರ್ ಟಿ ಸಿ ಬಸ್ ಬ್ರೇಕ್ ಫೇಲ್‌ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ಆಗಿ ಪಲ್ಟಿಯಾಗಿರುವ ಘಟನೆ ತಡವಲಗಾ ಬಳಿ ನಡೆದಿದೆ. ಇಂಡಿ ತಾಲ್ಲೂಕಿನ ತಡವಲಗಾದ ಜೋಡು ಗುಡಿ ಹತ್ತಿರ ವಿಜಯಪುರ ಕಡೆಯಿಂದ ಇಂಡಿ ಕಡೆಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 28, ಎಫ್ 2161ಪಲ್ಟಿಯಾಗಿದ್ದು, ಬಸ್ ನಲ್ಲಿ 60 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ