ಕೋಲಾರ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯೂ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಂಗಳವಾರ ಬೆಳಗ್ಗೆ ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಉಪ್ಪುಕುಂಟೆ ಗ್ರಾಮದಲ್ಲಿ ಭವ್ಯ ಸ್ವಾಗತ ಕೋರುವ ಮೂಲಕ ಯಾತ್ರೆ ಕೈಗೊಂಡರು
ತಾಲೂಕಿನ ಸುಗಟೂರು ಹಾಗೂ ಮದನಹಳ್ಳಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾಗಾಂಧಿ ಹೆಸರು ಹೇಳಿಕೊಂಡು ಮೂರು ಮೂರು ತಲೆಮಾರುಗಳಿಗೆ ಬೇಕಾದಷ್ಟು ಸಂಪಾದನೆ ಮಾಡಿದ ವ್ಯಕ್ತಿಬೇಕಾ ಇಲ್ಲ ಸ್ವಚ್ಛವಾಗಿ ಕಳಂಕರಹಿತವಾಗಿ ರಾಜಕಾರಣ ಮಾಡಿ ಸೋತರು ಜನರ ಮಧ್ಯೆ ಕೆಲಸ ಮಾಡಿಕೊಂಡು ಡಬಲ್ ಗೇಮ್ ಮಾಡದ ವ್ಯಕ್ತಿ ಬೇಕಾ ನೀವೇ ನಿರ್ಧಾರ ಮಾಡಿ ಮುಂದಿನ ವರ್ಷದ ರಾಜ್ಯದಲ್ಲಿ ಕನ್ನಡಿಗರ ಪಕ್ಷ ಅಧಿಕಾರಕ್ಕೆ ಬರಲಿದ್ದು ನಿಮ್ಮ ಮನೆ ಮಗ ಜಿ.ಕೆ ವೆಂಕಟಾಶಿವಾರೆಡ್ಡಿಯನ್ನು ಸಚಿವರಾಗಲಿಕ್ಕೆ ನೀವು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ನೀರಿನ ಭಗೀರಥ ಎಂದು ಸ್ವಯಂ ಘೋಷಿತ ವ್ಯಕ್ತಿ ಬೆಂಗಳೂರಿನ ಕೊಳಚೆ ನೀರು ತಂದಿದ್ದಾರೆ ಎತ್ತಿನಹೊಳೆ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಎಷ್ಟು ಡ್ರಾಮಗಳನ್ನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎತ್ತಿನಹೊಳೆ ಯೋಜನೆ 8 ಸಾವಿರ ಕೋಟಿಯಿಂದ 24 ಸಾವಿರ ಕೋಟಿಗೆ ತಲುಪಿಸಿದ್ದಾರೆ ಒಂದು ಹನಿ ನೀರು ಆದರೂ ಬಂದಿದ್ದೀಯಾ ಯೋಜನೆ ಹೆಸರಿನಲ್ಲಿ ಹಣಹೊಡೆದಿದ್ದೇ ಅ ಭಗೀರಥನ ಸಾಧನೆಯಾಗಿದೆ ಎಂದರು
ರಾಜ್ಯದಲ್ಲಿ 2018 ರಲ್ಲಿ ಸಂಮಿಶ್ರ ಸರ್ಕಾರವನ್ನು ಪತನಹೊಳಿಸುವಲ್ಲಿ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಪಾತ್ರ ದೊಡ್ಡದಿದೆ
ಕೆಳದ ಬಾರಿಯೇ ಮನೆಗೆ ಹೋಗಬೇಕಾದ ವ್ಯಕ್ತಿ ಡಿಸಿಸಿ ಬ್ಯಾಂಕ್ ಹೆಸರಿನಲ್ಲಿ ಶಾಸಕರಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಿದ್ದು ಏನು ಇಲ್ಲ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ ಮಹಿಳಾ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಪಂಚರತ್ನ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತೇನೆ ಇಲ್ಲದೇ ಹೋದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದರು
ರಥಯಾತ್ರೆ ಸಾಗುವ ದಾರಿಯುದ್ದಕ್ಕೂ ವಿವಿಧ ಗ್ರಾಮಗಳ ಗೇಟ್ ಗಳಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಜೈಕಾರ ಹಾಗೂ ಹೂಗಳಿಂದ ಸ್ವಾಗತ ಕೋರಿದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ, ಮಾಜಿ ಎಂಎಲ್ಸಿ ಚೌಡರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಸದಸ್ಯ ಗಣೇಶ್, ಕಿತ್ತಂಡೂರು ನಂಜುಂಡಪ್ಪ, ಡಾ.ಡಿ.ಕೆ ರಮೇಶ್, ಕೊಳಗಂಜನಹಳ್ಳಿ ಗೋಪಾಲಕೃಷ್ಣ, ಸುಗಟೂರು ಚಲಪತಿ, ವಳಗೇರನಹಳ್ಳಿ ಎಸ್ ಶಿವಾರೆಡ್ಡಿ, ವೆಲಗಲಬುರ್ರೆ ಪವನ್ ಕುಮಾರ್,ಮುಂತಾದವರು ಇದ್ದರು