ಭಾರತದ ಬಾಹ್ಯಾಕಾಶ ಕ್ಷೇತ್ರದ ಹೆಗ್ಗುರುತಾಗಿ, ವಿಕ್ರಮ್-ಎಸ್, ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್ , ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಶ್ರೀಹರಿಕೋಟಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾಯಿತು. ದೇಶದ ಬಾಹ್ಯಾಕಾಶದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ಹೆಸರಿಸಲಾದ ಸ್ಕೈರೂಟ್ ಏರೋಸ್ಪೇಸ್-ವಿಕ್ರಮ್-ಎಸ್, ತನ್ನ ಮೊದಲ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಕಂಡಿತು. ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ವಿಕ್ರಮ್-ಎಸ್ ಯಶಸ್ವಿ ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರಾಕೆಟ್ ಉಡಾವಣೆಯು ಭಾರತೀಯ ಸ್ಟಾರ್ಟ್ಆಫ್ಗಳಿಗೆ ಮಹತ್ವದ ತಿರುವು ನೀಡಲಿದೆ ಎಂದು ಹೇಳಿದರು.