ಕರ್ನಾಟಕದಲ್ಲಿ ಕಮಲ ಅರಳುವದು ನಿಶ್ಚಿತ: ಗೋವಾ ಸಿಎಂ ವಿಶ್ವಾಸ

ಗೋವಾ
Advertisement

ರಬಕವಿ-ಬನಹಟ್ಟಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಬಿಜೆಪಿ ಭಾರಿ ಬಹುಮತದಿಂದ ಆಡಳಿತ ನಡೆಸಲಿದ್ದು, ಡಬಲ್ ಎಂಜಿನ್ ಸರ್ಕಾರ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಹೇಳಿದರು.
ಹಿಪ್ಪರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ ಅರಳಿಸಲು ಕರ್ನಾಟಕದ ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸಾಕಷ್ಟು ಕಾರ್ಯಗಳು ರೂಪಿತಗೊಂಡಿದ್ದು, ಜನತೆ ಮತ್ತೊಮ್ಮೆ ನಿಶ್ಚಿತ ಆಶೀರ್ವಾದ ಮಾಡಲಿದ್ದಾರೆಂದರು.