ಸುಳ್ಯ: ದಕ್ಷಿಣ ಕನ್ನಡದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಆಕಸ್ಮಿಕವಾಗಿ ಗುಹೆ ಪತ್ತೇಯಾಗಿದೆ.
ಗುಹೆಯಿಂದ ಸಂಗ್ರಹಿಸಲಾದ ಮಣ್ಣಿನ ಮಡಿಕೆಗಳು ಮತ್ತು ಕುಂಬಾರಿಕೆಗಳ ತುಣುಕುಗಳ ಅಧ್ಯಯನವು ಕಬ್ಬಿಣದ ಯುಗ ಅಥವಾ ಮೆಗಾಲಿಥಿಕ್ ಕಾಲದ ಗುಹೆಯಾಗಿರಬಹುದು ಎಂದು ಪುರಾತತ್ವ ವಸ್ತುಗಳ ಸಂಶೋಧಕ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕ ಪ್ರೋ.ಟಿ.ಮುರುಗೇಶಿ ತಿಳಿಸಿದ್ದಾರೆ.