ರಾಷ್ಟ್ರಪತಿ ಬಗ್ಗೆ ಟಿಎಂಸಿ ಸಚಿವ ಅಖಿಲ್ ಹೇಳಿಕೆ: ವ್ಯಾಪಕ ಆಕ್ರೋಶ

ಅಖಿಲ್
Advertisement

ಕೋಲ್ಕತ್ತ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಹೇಳನ ಮಾಡಿ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ಮಾತನಾಡಿರುವ ದೃಶ್ಯ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಪಶ್ಚಿಮ ಬಂಗಾಳ ಸಚಿವ ಮತ್ತು ಟಿಎಂಸಿ ಮುಖಂಡ ಅಖಿಲ್ ಗಿರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ರಾಜಕೀಯ ಯಾವ ಮಟ್ಟಕ್ಕೆ ಕೆಳ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಸುವೇದು ಅಧಿಕಾರಿ ನಾನು ನೋಡಲು ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ನೀವು ತುಂಬಾ ಸುಂದರವಾಗಿದ್ದೀರಿ! ನೋಟದಿಂದ ಮಾತ್ರ ನಾವು ಯಾರನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ನಾವು ರಾಷ್ಟ್ರಪತಿ ಕಚೇರಿಗೆ ಗೌರವ ನೀಡುತ್ತೇವೆ. ಆದರೆ, ನಮ್ಮ ರಾಷ್ಟ್ರಪತಿ ಹೇಗೆ ಕಾಣಿಸುತ್ತಾರೆ? ಎಂದು ಕೇಳಿದ್ದಾರೆ. ಈ ದೃಶ್ಯ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
‘ಇದು ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಇದು ತೃಣಮೂಲ ಕಾಂಗ್ರೆಸ್​ನ ಅಭಿಪ್ರಾಯವಲ್ಲ. ದೇಶದ ರಾಷ್ಟ್ರಪತಿಗಳ ಬಗ್ಗೆ ನಮಗೆ ಅತೀವ ಗೌರವವಿದೆ. ರಾಷ್ಟ್ರಪತಿಗಳು, ಅವರ ಹುದ್ದೆ ಬಗ್ಗೆ ನಮಗೆ ಅತ್ಯುನ್ನತ ಗೌರವ ಇದೆ’ ಎಂದು ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಹೇಳಿದ್ದಾರೆ.