ಬೆಳಗಾವಿ: ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತನಾಡುವುದು ಅಷ್ಟೇ ಅಲ್ಲ ಸಮರ್ಥನೆ ಮಾಡುವ ಸಾಹಸವನ್ನು ಸತೀಶ ಮಾಡಿದ್ದಾರೆ. ಆದರೆ, ಈಗ ವಿಷಾದ ವ್ಯಕ್ತಪಡಿಸಿದ್ದೀನಿ ಅನ್ನೋದು ಎಷ್ಟರ ಮಟ್ಟಿಗೆ ಸರಿ ತಪ್ಪು ಅನ್ನೋದನ್ನು ಅವರ ಆತ್ಮಸಾಕ್ಷಿಗೆ ಬಿಡುವೆ ಎಂದರು.
ನನಗೆ ಆಶ್ಚರ್ಯ ಆಗಿರುವಂತದ್ದು ಸತೀಶ್ ಜಾರಕಿಹೊಳಿ ದುಡುಕುವರಲ್ಲ ಕಾಂಗ್ರೆಸ್ ಸಹವಾಸದಿಂದ ಕಾಂಗ್ರೆಸ್ ಸಂಸ್ಕೃತಿ ಪ್ರಭಾವದಿಂದ ಹೀಗಾಗಿದೆ ಎಂದರು.
ಕಾಂಗ್ರೆಸ್ ಸಂಸ್ಕೃತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುವುದು, ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ದೇವಸ್ಥಾನಕ್ಕೆ ಹೋಗುವಂತದ್ದು, ಟೆಂಪಲ್ ರನ್ ಮಾಡುವಂತದ್ದು ಸಹಜವಾಗಿ ಕಾಂಗ್ರೆಸ್ ಎಲ್ಲ ವೋಟ್ ಬ್ಯಾಂಕ್ ಸಲುವಾಗಿ ಮಾಡುತ್ತದೆ ಎಂದರು.
ಅಲ್ಪಸಂಖ್ಯಾತರ ತುಷ್ಠಿಕರಣ ಜೊತೆಗೆ ವಕ್ಫ್ ಪ್ರಾಪರ್ಟಿಯನ್ನು ಮುಚ್ಚಿರುವಂತಹದ್ದು, ಅಧಿಕಾರಕ್ಕಾಗಿ ಹಿಂದುಗಳನ್ನ ದ್ವೇಷಿಸುವುದು, ದೋಷಿಸುವುದು ಮಾಡಿದ್ದಾರೆ.
ದೇಶದ ಅಭಿಮಾನ ಆಗಲಿ, ಪ್ರೀತಿ ಆಗಲಿ ಎಳ್ಳಕಾಳಷ್ಟು ಇಲ್ಲ. ಇದಕ್ಕೆ ಹತ್ತು ಹಲವಾರು ಉದಾಹರಣೆ ನೀಡಬಹುದು. ಹೀಗಾಗಿ ರಾಜಕಾರಣಕ್ಕಾಗಿ, ಮತಕ್ಕಾಗಿ ಮಾಡುವ ಕೆಟ್ಟ ರಾಜಕಾರಣ ನಿಲ್ಲಬೇಕು. ಸತೀಶ್ ಜಾರಕಿಹೊಳಿ ಪತ್ರ ಏನಿದೆ ನೋಡ್ತಿನಿ ಎಂದರು.