ಜಾರಕಿಹೊಳಿ ಕುಟುಂಬ ಟಾರ್ಗೆಟ್ ಹೊಸದೆನಲ್ಲ

Satish-Jarkiholi
Advertisement

ಬೆಳಗಾವಿ: ಜಾರಕಿಹೊಳಿ ಕುಟುಂಬವನ್ನು ಬೆಳಗಾವಿಯಲ್ಲಿ ಸ್ವಲ್ಪ ಸಮುದಾಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಹೊಸದೇನಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಇದರ ಅನುಭವ ಆಗಿದೆ. ಲೇಬಲ್ ಅಷ್ಟೇ ಬದಲಾವಣೆ ಆಗುತ್ತದೆ. ಗಾಡಿ, ಮಂದಿ ಅವರೇ ಇರುತ್ತಾರೆ. ಬೆಳಗಾವಿ ಟೂ ಗೋಕಾಕ್, ಗೋಕಾಕ್ ಟೂ ಬೆಳಗಾವಿ. ಬೈಲಹೊಂಗಲಕ್ಕೂ ಬಾಗೇವಾಡಿ ಮಾರ್ಗವಾಗಿ ಗಾಡಿ ಹೋಗುತ್ತಿರುತ್ತದೆ ಎಂದರು.
ಆದರೆ ಜಾರಕಿಹೊಳಿ ಗಾಡಿಯಲ್ಲಿ ಎಲ್ಲಾ ಪಕ್ಷದವರು ಕುಳಿತುಕೊಂಡಿರುತ್ತಾರೆಂದು ಹಾಸ್ಯ ಚಟಾಕಿ ಹಾರಿಸಿದರು. ನನ್ನ ಗಾಡಿ ಸವದತ್ತಿ ಕಡೆಗೆ ಹೋಗುವುದಿಲ್ಲ. ಯಮಕನಮರಡಿಯಲ್ಲಿಯೇ ಇರುತ್ತದೆ ಎನ್ನುವ ಮೂಲಕ ಸವದತ್ತಿಯಿಂದ ಸ್ಪರ್ಧೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.
ಎಂಎಲ್‌ಎ, ಮಂತ್ರಿ, ಸಿಎಂ ಆಗಬೇಕು ಎನ್ನುವ ಆಸೆ ನನಗೇನು ಇಲ್ಲ. ಸಮಾಜ ಸೇವೆ ಕೆಲಸ ಮಾಡಲು ನಮಗೆ ಖುಷಿ ಇದೆ. ಈಗ ಎಂಎಲ್‌ಎ ಆಗಿ ಮಾತಾಡಬೇಕಾಗುತ್ತದೆ. ಪೂರ್ಣಪ್ರಮಾಣದಲ್ಲಿ ನಮ್ಮನ್ನು ಫ್ರೀ ಬಿಟ್ಟರೆ ನಾವು ಫುಲ್ ಟೈಮ್ ಇದನ್ನೇ ಮಾಡುತ್ತೇವೆ. ನಾವು ಯಾರನ್ನೂ ಬೈಯುವ ಪ್ರಶ್ನೆಯೇ ಇಲ್ಲ. ಅವರ ಪಾರ್ಟಿಯವರೇ ಏನೇನೋ ಬೈಯುತ್ತಾರೆ ಎಂದರು.