ಧಾರವಾಡ: ರೈತರು ಎತ್ತುಗಳನ್ನು ಬಾರಕೋಲಿನಿಂದ ಹೊಡೆದು ಸರಿದಾರಿಗೆ ತಂದು ಕೃಷಿ ಮಾಡುವ ರೀತಿಯಲ್ಲಿ ಜನಪ್ರತಿನಿಧಿಗಳ ಬುದ್ಧಿಯನ್ನೂ ಸರಿದಾರಿಗೆ ತರಲು ಬಾರಕೋಲ್ ಚಳವಳಿ ನಡೆಸಲಾಯಿತು.
ಕಳೆದ ಎರಡು ದಿನಗಳಿಂದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಸಚಿವರು ಬಾರದ ಹಿನ್ನೆಲೆಯಲ್ಲಿ ಬುಧವಾರ ರೈತರು ಬಾರಕೋಲ್ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಎರಡು ಜೋಡಿ ಎತ್ತುಗಳನ್ನು ತರಲಾಗಿತ್ತು.