ಕನ್ನಡಿಗರ ಪುಣ್ಯಭೂಮಿಯಲ್ಲಿ ನಾಡದ್ರೋಹಿಗಳ ಅಟ್ಟಹಾಸ..!

ಬೆಳಗಾವಿ
Advertisement

ಬೆಳಗಾವಿ: ಗಡಿನಾಡ ಕನ್ನಡಿಗರ ಪುಣ್ಯಭೂಮಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ಕನ್ನಡಿಗರ ಹಕ್ಕೊತ್ತಾಯವನ್ನು ಲೆಕ್ಕಿಸದೇ ಕರಾಳ ದಿನಕ್ಕೆ ಮೌನ ಸಮ್ಮತಿ ನೀಡಿದ ಪೊಲೀಸರು ನಾಡದ್ರೋಹಿಗಳ ಆಟಾಟೋಪಕ್ಕೆ ಸಾಕ್ಷಿಯಾದರು.
ಮೆರವಣಿಗೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳುತ್ತಿದ್ದ ಪೊಲೀಸರು ನಾಡದ್ರೋಹಿಗಳು ನಡೆಸಿದ ರ‍್ಯಾಲಿಗೆ ಖಡಕ್ ಬಂದೊಬಸ್ತ್ ನೀಡಿದರು.
ಬೆಳಗಾವಿಯ ಶಹಾಪುರ ಪ್ರದೇಶದಲ್ಲಿ ನಡೆದ ಕರಾಳ ದಿನ ಮೆರವಣಿಗೆಯಲ್ಲಿ ನಾಡದ್ರೋಹಿಗಳು ಕಪ್ಪು ಬಟ್ಟೆ ಧರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯುದ್ದಕ್ಕೂ ಝಾಲಾಚ್ ಪಾಯಿಜೆ ಎನ್ನುವ ಹಳಸಲು ಘೋಷಣೆ ಕೂಗುತ್ತಿದ್ದರು. ಮೆರವಣಿಗೆಯು ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡು ಶಿವಾಜಿ ಉದ್ಯಾನದ ಮೂಲಕ ಸಂಚರಿಸಿ ಮರಾಠಾ ಮಂಗಲ ಕಾರ್ಯಾಲಯಕ್ಕೆ ಅಂತ್ಯಗೊಂಡಿತು.