ಹುಬ್ಬಳ್ಳಿ: ತೈಲ ಬೆಲೆ ಏರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಚೊಂಬು ನೀಡಿದೆ. ಜನ ಚುನಾವಣೆಯಲ್ಲಿ ಪಾಠ ಕಲಿಸಿರುವುದರಿಂದ ಆ ಸಿಟ್ಟಿಗೆ ಜನರಿಗೆ ದರ ಏರಿಕೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆಂದೂ ಕಾಣದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆ ಕೊಟ್ಟು, ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ. ತೊಗರಿಬೇಳೆ, ಸೋನಾ ಮಸೂರಿ ಅಕ್ಕಿ ಧಾನ್ಯಗಳ ದರ ಏರಿಕೆಯಾಗಿದೆ. ಮದ್ಯ ದರ ಏರಿಕೆಯಾಗಿದೆ.ಹೀಗಾಗಿ ಸರ್ಕಾರ ಯಾರ ಪರವಾಗಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ.
ಈ ಹಿನ್ನೆಲೆ ದರ ಇಳಿಕೆ ಮಾಡಬೇಕು ಎಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.೧೭ ರಂದು ಪ್ರತಿಭಟನೆ ಮಾಡಲಾಗುದು ಎಂದರು.