ಸಕ್ರಿಯ ರಾಜಕಾರಣದಿಂದ ವಿಕೆ ಪಾಂಡಿಯನ್ ನಿವೃತ್ತಿ

Advertisement

ಭುವನೇಶ್ವರ್: ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಪ್ತ ವಿಕೆ ಪಾಂಡಿಯನ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ವಿಡಿಯೋ ಮೆಸೇಜ್‌ನಲ್ಲಿ ಪಾಂಡಿಯನ್ ನಿವೃತ್ತಿ ಘೋಷಣೆ ಮಾಡಿದ್ದಾರೆ. “ಈಗ ನಾನು ಪ್ರಜ್ಞಾಪೂರ್ವಕವಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಪ್ರಯಾಣದಲ್ಲಿ ನಾನು ಯಾರಿಗಾದರೂ ನೋಯಿಸಿದ್ದರೆ ಕ್ಷಮಿಸಿ. ಬಿಜೆಡಿಯ ಸೋಲಿನಲ್ಲಿ ಪಾತ್ರವಿದೆ, ಹಾಗಾಗಿ ನಾನು ಪಕ್ಷದ ಕಾರ್ಯಕರ್ತರನ್ನು ಕ್ಷಮೆ ಕೋರುವೆ ಎಂದಿದ್ದಾರೆ.
ಈ ಮೊದಲು ಐಎಎಸ್ ಅಧಿಕಾರಿಯಾಗಿದ್ದ ಪಾಂಡಿಯನ್ ನಿವೃತ್ತಿ ಪಡೆದು ಬಿಜೆಡಿಗೆ ಸೇರ್ಪಡೆಯಾಗಿದ್ದರು.