ಕೆಲವೇ ವಾರಗಳಲ್ಲಿ ೩ನೇ ಮಹಾಯುದ್ಧ..?

Advertisement

ಚಂಡೀಗಢ: ಮೂರನೇ ಮಹಾಯುದ್ಧ ಕುರಿತು ಕಳೆದ ಕೆಲವು ದಶಕಗಳಿಂದ ತೀವ್ರ ಚರ್ಚೆ ಹಾಗೂ ಉಹಾಪೋಹಗಳು ಹರಡುತ್ತಿವೆ. ಮೊದಲೆರಡು ಮಹಾಯುದ್ಧದ ವಿನಾಶಕಾರಿ ಪರಿಣಾಮಗಳು ಇನ್ನೂ ಜಗತ್ತಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವಾಗ ಮತ್ತೊಂದು ದೊಡ್ಡ ಪ್ರಮಾಣದ ಸಂಘರ್ಷದ ಕಲ್ಪನೆಯು ಬಹಳ ಭಯಾನಕ ಹಾಗೂ ಆತಂಕಕಾರಿ.
ಜಗತ್ತಿನ ಭವಿಷ್ಯಕಾರರಾದ ನಾಸ್ಟಾçಡಾಮಸ್ ಹಾಗೂ ಬಾಬಾ ವಂಗಾ ಸೇರಿದಂತೆ ಅನೇಕ ಜ್ಯೋತಿಷಿಗಳು ಮೂರನೇ ಮಹಾಯುದ್ಧ ಕುರಿತು ಭವಿಷ್ಯ ನುಡಿದಿದ್ದರೂ ಅದರ ಸಾಧ್ಯತೆ ಅನಿಶ್ಚಿತತೆಯಾಗಿಯೇ ಉಳಿದಿದೆ. ಆದರೂ ಕಾಲಕಾಲಕ್ಕೆ ಅಂತಹ ಭವಿಷ್ಯವಾಣಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆಯುತ್ತಲೇ ಇವೆ.
ಇದೀಗ ಪಂಚಕುಲ ಮೂಲದ ಜ್ಯೋತಿಷಿ ಕುಶಾಲ್ ಕುಮಾರ್ ಮೂರನೇ ಮಹಾಯುದ್ಧಕ್ಕೆ ಕೆಲವೇ ವಾರಗಳು ಉಳಿದಿವೆ ಎಂದಿದ್ದಾರೆ. ವೈದಿಕ ಜ್ಯೋತಿಷದ ಅನುಸಾರ ಜೂನ್ ೧೮ರ ಮಂಗಳವಾರ ಯುದ್ಧಕ್ಕೆ ಪ್ರಚೋದಿಸುವ ಗ್ರಹಗಳ ಸ್ಥಿತಿಯಿದೆ. ಇದಲ್ಲದೆ, ಜೂನ್ ೧೦ ಅಥವಾ ೨೯ರಂದೂ ಯುದ್ಧ ಆರಂಭವಾಗಬಹುದು ಎಂದವರು ಹೇಳಿಕೊಂಡಿದ್ದಾರೆ.
ಕೆಲವು ದೇಶಗಳಲ್ಲಿ ಆಡಳಿತ ನಡೆಸುವ ಅಧಿಕಾರ ನಡೆಸುವವವರು ಹೊಸದಾಗಿ ಉದ್ಭವಿಸುವ ಯುದ್ಧಪರಿಸ್ಥಿತಿಯನ್ನು ನಿಭಾಯಿಸಲು ಬಹಳ ಕಷ್ಟಪಡಬಹುದು. ಅವರಲ್ಲಿ ಕೆಲವರು ಗಂಭೀರವಾಗಿ ಅಸ್ವಸ್ಥರಾಗಬಹುದು ಅಥವಾ ರಾಜೀನಾಮೆ ನೀಡಬಹುದು. ರಾಜಕೀಯ ಕ್ಷೇತ್ರದಲ್ಲಿ ಏರುಪೇರುಗಳಾಗಬಹುದು. ಪರಿಸ್ಥಿತಿ ದುರ್ಬಲವಾಗಿರುವಲ್ಲಿ ಸಾಮಕಾಲೀನ ಗ್ರಹಗಳ ಚಲನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೈನ್ಯ ಹೆಜ್ಜೆ ಹಾಕಬಹುದು ಎಂದವರು ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿರುವ ಮೀಡಿಯಂ ಎನ್ನುವ ತಾಣದಲ್ಲಿ ವಿವರಿಸಿದ್ದಾರೆ.