ಸಿದ್ದರಾಮಯ್ಯನವರಿಗೆ ದಲಿತರ ಸಮಸ್ಯೆಗಳ ಅರಿವಿಲ್ಲ

ಜನಸಂಕಲ್ಪ ಯಾತ್ರೆ
Advertisement

ಕುಷ್ಟಗಿ: ಕೊಪ್ಪಳ ಏತ ನೀರಾವರಿಗೆ 2750 ಕೋಟಿ ಅನುಮೋದಿಸಿದೆ. ಮೊದಲನೆ ಹಂತ ೧೦೦೦ ಕೋಟಿ, ಎರಡನೇ ಹಂತದಲ್ಲಿ 1750 ಕೋಟಿ ಬಿಡುಗಡೆ‌ ಮಾಡಲಾಗಿದೆ. ದಲಿತರ ಸಮಸ್ಯೆಗಳು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಮೀಸಲಾತಿ ಬಗ್ಗೆ ರಾಹುಲ್‌ಗೆ ಗೊತ್ತಿಲ್ಲ.‌ ದೇಶದ‌ ಗಂಭೀರ ಚಿಂತನೆಗಳು ಏನೂ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ದಲಿತರ ಸಮಸ್ಯೆಗಳು ಗೊತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಬಳಕೆ ಮಾಡಿಕೊಂಡು ವೋಟ್ ಬ್ಯಾಂಕ್ ಮಾಡಿಕೊಂಡು ಸುಳ್ಳು ಹೇಳಿ ಅಧಿಕಾರ‌ ನಡೆಸಿದವರು. ನೀವು ಮನೆಗೆ ಹೋಗೋ ಕಾಲ‌ಬಂದಿದೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದರು.