ಬೆಳಗಾವಿ ಅಂತಿಮ ಕಣದಲ್ಲಿ ೧೩ ಅಭ್ಯರ್ಥಿಗಳು

Advertisement

ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು ೨೧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಸೋಮವಾರ ಒಟ್ಟು ೮ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಅಂತಿಮ ಕಣದಲ್ಲಿ ಒಟ್ಟು ೧೩ ಅಭ್ಯರ್ಥಿಗಳು ಉಳಿದಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು:
೧. ಮಲ್ಲಪ್ಪ ಚೌಗಲಾ (ಉತ್ತಮ ಪ್ರಜಾಕೀಯ ಪಕ್ಷ)
೨. ಜಗದೀಶ ಶೆಟ್ಟರ್ (ಬಿಜೆಪಿ)
೩. ಬಸಪ್ಪ ಗುರುಸಿದ್ದಪ್ಪ ಕುಂಬಾರ (ಕರ್ನಾಟಕ ರಾಷ್ಟ್ರ ಸಮಿತಿ)
೪. ಮೃಣಾಲ ಹೆಬ್ಬಾಳಕರ (ಕಾಂಗ್ರೆಸ್ ಪಕ್ಷ)
೫. ರವಿ ಪಡಸಲಗಿ (ಪಕ್ಷೇತರ)
೬. ಅಶೋಕ ಅಪ್ಪುಗೋಳ (ಬಹುಜನ ಸಮಾಜ ಪಾರ್ಟಿ)
೭. ಪುಂಡಲೀಕ ಇಟ್ನಾಳ (ಪಕ್ಷೇತರ)
೮. ಅಶೋಕ ಪಾಂಡಾಪ್ಪಾ ಹಣಜಿ (ಪಕ್ಷೇತರ)
೯. ಲಕ್ಷ್ಮಣ ಜಡಗಣ್ಣನವರ (ಎಸ್.ಯು.ಸಿ.ಐ.ಸಿ)
೧೦. ಮಹಾದೇವ ಪಾಟೀಲ (ಪಕ್ಷೇತರ)
೧೧. ನಿತಿನ ಅಶೋಕ ಮಹಾಡಗುತ (ಪಕ್ಷೇತರ)
೧೨. ಅಶ್ಪಕ್ ಅಹಮದ ಉಸ್ತಾದ (ಪಕ್ಷೇತರ)
೧೩. ವಿಜಯ ಮೇತ್ರಾಣಿ (ಅಖಿಲ ಭಾರತೀಯ ಹಿಂದೂ ಮಹಾಸಭಾ)