ಇಳಕಲ್: ಇಲ್ಲಿನ ಜನನಿಬಿಡ ಅಂಬೇಡ್ಕರ ಸರ್ಕಲ್ನಲ್ಲಿ ರವಿವಾರ ಸಂಜೆ ಕಾರೊಂದು ಅಡ್ಡಾದಿಡ್ಡಿ ಚಲಿಸಿ ಜನರಲ್ಲಿ ಭೀತಿ ಹುಟ್ಟಿಸಿದ ವಿದ್ಯಮಾನ ನಡೆಯಿತು.
ನಗರದ ಕಂಠಿ ಸರ್ಕಲ್ನಿಂದ ಗೊರಬಾಳ ನಾಕಾಗೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಈ ರಸ್ತೆಯಲ್ಲಿ ನಿಮಿಷಕ್ಕೆ ಹತ್ತಾರು ವಾಹನಗಳು ಸಂಚರಿಸುತ್ತವೆ. ಇಂತಹ ಸ್ಥಳದಲ್ಲಿ ವಾಗ್ನರ್ ಕಾರ್ ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅದನ್ನು ಬಂಬು ಅಂಗಡಿಯಲ್ಲಿ ಹೊಗಿಸಿ ಚರಂಡಿ ಸಮೀಪದಲ್ಲಿ ನಿಂತಿದ್ದಾನೆ.
ಅದೃಷ್ಟವಶಾತ್ ಆ ಸಮಯದಲ್ಲಿ ಯಾವುದೇ ವಾಹನ ಅದರ ಸಮೀಪ ಹೋಗದೇ ಬಚಾವಾಗಿವೆ. ಚಾಲಕನ ಕೈಗೆ ಗಾಯವಾಗಿದ್ದು ಕೂಡಿದ್ದ ಜನರೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.